ನವದೆಹಲಿ: ದೂರದರ್ಶನದ ಖ್ಯಾತ ಮಾಜಿ ನಿರೂಪಕಿ ಸರಳಾ ಮಹೇಶ್ವರಿ ಅವರಿಂದು (ಫೆ.12) ರಂದು ತಮ್ಮ 71ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.
ಈ ಕುರಿತು ದೂರದರ್ಶನ ವಾಹಿನಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸರಳಾ ಮಹೇಶ್ವರಿ ಅವರು ಭಾರತೀಯ ದೂರದರ್ಶನ ಪತ್ರಿಕೋದ್ಯಮದಲ್ಲಿ ಓರ್ವ ಹೆಮ್ಮೆಯ ನಿರೂಪಕಿಯಾಗಿದ್ದವರು.
1980 ಮತ್ತು 1990ರ ದಶಕಗಳಲ್ಲಿ ದೂರದರ್ಶನ ನ್ಯೂಸ್‌ನ ಪ್ರಮುಖ ಮುಖವಾಗಿದ್ದ ಸರಳಾ ಮಹೇಶ್ವರಿ ಅವರು, ತಮ್ಮ ವಿಶಿಷ್ಟ ವಾಚನ ಶೈಲಿ, ನಿಖರ ಉಚ್ಚಾರಣೆ ಮತ್ತು ಘನತೆಯ ನಿರೂಪಣೆಯ ಮೂಲಕ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.

