ಉತ್ತರ ಪ್ರದೇಶ: ಉತ್ತರ ಪ್ರದೇಶದ ಗೊಂಡಾ-ಮಂಕಾಪುರ ವಿಭಾಗದಲ್ಲಿ ಚಂಡೀಗಢ-ದಿಬ್ರುಘರ್ ರೈಲು ಹಳಿ ತಪ್ಪಿದೆ. ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ, ಹಲವು ಪ್ರಯಾಣಿಕರು ಗಾಯಗೊಂಡಿರೋದಾಗಿ ಹಾಗೂ ಸಾವನ್ನಪ್ಪಿರೋದು ವರದಿಯಾಗಿದೆ.
ಈ ಕುರಿತಂತೆ ಉತ್ತರ ಪ್ರದೇಶದ ಸಿಎಂ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಗೊಂಡಾ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಂಭೀರವಾಗಿ ಪರಿಗಣಿಸಿದ್ದಾರೆ. ಅವರು ತಕ್ಷಣ ಘಟನಾ ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಿದ್ದಾರೆ ಎಂದಿದೆ.

