ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಂದ ದಿನಕ್ಕೊಂದು ತೊಂದರೆ ಕಾಣಸಿಗುತ್ತವೆ.ಅವರ ಎಡೆ ಮುರಿ ಕಟ್ಟಲು ಭದ್ರತಾ ಪಡೆ ತನ್ನ ಕರ್ತವ್ಯ ಚುರುಕುಗೊಳಿಸಿದೆ ಇದೀಗ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.

ಜೂನ್ 11 ಮತ್ತು 12 ರಂದು ಗುಡ್ಡಗಾಡು ಜಿಲ್ಲೆಯಲ್ಲಿ ನಡೆದ ಅವಳಿ ಉಗ್ರ ದಾಳಿ ನಂತರ ಭದ್ರತಾ ಮಡೆ ತೀವ್ರ ಶೋಧ ಮತ್ತು ಕಾರ್ಯಚರಣೆಯಲ್ಲಿ ತೊಡಗಿತ್ತು. ಇಂದು ಬೆಳಗ್ಗೆ 9.50 ರ ಸುಮಾರಿಗೆ ಗಂಡೋ ಪ್ರದೇಶದ ಬಜಾದ್ ಗ್ರಾಮದಲ್ಲಿ ಗುಂಡಿನ ಚಕಮಕಿ ಪ್ರಾರಂಭವಾಗಿತ್ತು.

ಭದ್ರತಾ ಪಡೆಗಳ ಸಹಾಯದಿಂದ ಪೊಲೀಸರು ಸಿನೂ ಪಂಚಾಯತ್ ಗ್ರಾಮದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಅಡಗಿಕೊಂಡಿದ್ದ ಉಗ್ರರು ಭಾರೀ ಗುಂಡಿನ ದಾಳಿ ನಡೆಸಿದ್ದಾರೆ. ಇನ್ನಿಬ್ಬರು ಉಗ್ರರು ಸ್ಥಳದಲ್ಲಿದ್ದಾರೆ ಎಂದು ಹೇಳಲಾಗಿದ್ದು ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.