ನವದೆಹಲಿ: ವಿದ್ಯುತ್ ಗೀಸರ್ ಸ್ಫೋಟದಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಆಗ್ನೇಯ ದೆಹಲಿಯಲ್ಲಿ ನಡೆದಿದೆ.

50 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಅವರ ಪತ್ನಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಹಜರತ್ ನಿಜಾಮುದ್ದೀನ್ ಪ್ರದೇಶದಲ್ಲಿ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.

ಮನೆಯಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿ ಮಾಡಿದ ಪಿಸಿಆರ್ ಕರೆ ಪೊಲೀಸರಿಗೆ ಬಂದಿದ್ದು, ಸ್ಥಳಕ್ಕೆ ತಂಡವೊಂದು ಧಾವಿಸಿದೆ ಎಂದು ಅವರು ಹೇಳಿದರು. ಮನೆ ಒಳಗಿನಿಂದ ಲಾಕ್ ಆಗಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಬಾಗಿಲು ಒಡೆದು ನೋಡಿದಾಗ ಒಳಗೆ ಆವರಿಸಿದ್ದ ಹೊಗೆ ಉಸಿರಾಡಿದ ಕಾರಣ ಪ್ರಜ್ಞಾಹೀನರಾಗಿದ್ದರು.

ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಸ್ನಾನಗೃಹದಲ್ಲಿದ್ದ ಮನೆ ಮಾಲೀಕ ಮೊಹಮ್ಮದ್ ಸಯೀದ್ ನಿಜಾಮಿ ಮತ್ತು ಅವರ ಪತ್ನಿ ಫಿದಾ ನಿಜಾಮಿ(45) ಹೊಗೆಯನ್ನು ಉಸಿರಾಡಿದ ಕಾರಣ ಪ್ರಜ್ಞಾಹೀನರಾಗಿದ್ದರು. ಸಯೀದ್ ನಿಜಾಮಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಬ್ಬರೂ ಬಲಿಪಶುಗಳನ್ನು ಮೂಲ್ ಚಂದ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ನಿಜಾಮಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು, ಆದರೆ ಅವರ ಪತ್ನಿ ಪ್ರಜ್ಞೆ ಮರಳಿ ಬಂದಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಾಗಿದೆ.