ದೆಹಲಿ: ಕೋಲ್ಕತ್ತಾ ಪ್ರಕರಣದ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಗುರುವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಕಪಿಲ್ ಸಿಬಲ್ ನಕ್ಕಿದ್ದು, ಸಾಲಿಸಿಟರ್ ಜನರಲ್ (SG) ತುಷಾರ್ ಮೆಹ್ತಾ ಇದಕ್ಕೆ ಕಟು ಪ್ರತಿಕ್ರಿಯೆ ನೀಡಿದ್ದಾರೆ.
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಏಪ್ರಿಲ್ 9 ರಂದು ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ-ಕೊಲೆ ಪ್ರಕರಣ ಬಗ್ಗೆ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಸಿಬಲ್ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದರೆ, ಮೆಹ್ತಾ ಅವರು ಕಲ್ಕತ್ತಾ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಪರವಾಗಿ ಹಾಜರಾಗಿದ್ದಾರೆ.
ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷ ಸಿಬಲ್ ಮತ್ತು ಮೆಹ್ತಾ ನಡುವೆ ವಾದ ನಡೆಯುತ್ತಿರುವಾಗ ಹಿರಿಯ ವಕೀಲರು ನಕ್ಕ ಘಟನೆ ಸಂಭವಿಸಿದೆ. ಸರ್ಕಾರಿ ವಕೀಲರು ಪೊಲೀಸರಿಂದ ಎಫ್‌ಐಆರ್‌ನ ದಾಖಲಾತಿಯಲ್ಲಿನ ‘ಅಂತರ’ಗಳನ್ನು ಎತ್ತಿ ತೋರಿಸುತ್ತಿದ್ದರು. “ಆದ್ದರಿಂದ ಇದು ಜನರಲ್ ಎಂಟ್ರಿ” ಎಂದು ಮೆಹ್ತಾ ಹೇಳಿದಾಗ ಕಪಿಲ್ ಸಿಬಲ್ ನಕ್ಕಿದ್ದಾರೆ.
ಇದಕ್ಕೆ ಸಿಟ್ಟುಗೊಂಡ ಮೆಹ್ತಾ, ಒಂದು ಹುಡುಗಿ ತನ್ನ ಪ್ರಾಣವನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ಕಳೆದುಕೊಂಡಿದ್ದಾರೆ. ಯಾರೋ ಸತ್ತಿದ್ದಾರೆ. ನಗಬೇಡಿ ಎಂದು ಹೇಳಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತುಷಾರ್ ಮೆಹ್ತಾಗೆ ಪ್ರತಿಕ್ರಿಯೆ ನೀಡಿದ ಕಪಿಲ್ ಸಿಬಲ್, ಇದು ಅತ್ಯಂತ ಬರ್ಬರ, ಅನಾಗರಿಕ ಕೃತ್ಯ ಎಂಬುದು ನಮಗೆಲ್ಲರಿಗೂ ಗೊತ್ತು, ಆದರೆ ನೀವು ಈಗ ಕೆಸರೆರೆಚಾಟ ಮಾಡುತ್ತಿದ್ದೀರ ಎಂದು ಸಿಬಲ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
“Somebody has lost their life. Don’t at least laugh,” says Solicitor General Tushar Mehta to Weat Bengal Govt counsel Kapil Sibal in Supreme Court just now: pic.twitter.com/W9LIcXDYPB
— Shiv Aroor (@ShivAroor) August 22, 2024

