ದೆಹಲಿ : ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಪ್ರಕರಣದಲ್ಲಿ ಡಿಎಂಕೆ ಸಂಸದ ಎಸ್ ಜಗತ್ರಕ್ಷಕನ್  ಮತ್ತು ಅವರ ಕುಟುಂಬಕ್ಕೆ ಜಾರಿ ನಿರ್ದೇಶನಾಲಯ ₹908 ಕೋಟಿ ದಂಡ ವಿಧಿಸಿದೆ. ಈ ಮೊತ್ತದಲ್ಲಿ ₹89 ಕೋಟಿ ಮೌಲ್ಯದ ಜಪ್ತಿ ಆಸ್ತಿ ಸೇರಿದೆ ಎಂದು ಸಂಸ್ಥೆ ತಿಳಿಸಿದೆ. ಫೆಮಾದ ಸೆಕ್ಷನ್ 37ಎ ಅಡಿಯಲ್ಲಿ ವಶಪಡಿಸಿಕೊಂಡ 89.19 ಕೋಟಿ ರೂ.ಗಳನ್ನು ಜಪ್ತಿ ಮಾಡಲು ಆದೇಶಿಸಲಾಗಿದೆ ಎಂದು ಇಡಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಹೆಚ್ಚುವರಿಯಾಗಿ, ಸೋಮವಾರ ಹೊರಡಿಸಿದ ತೀರ್ಪಿನ ಆದೇಶದ ಮೂಲಕ ಸರಿಸುಮಾರು ₹ 908 ಕೋಟಿ ದಂಡವನ್ನು ವಿಧಿಸಲಾಗಿದೆ ಎಂದು ಅದು ಹೇಳಿದೆ. “ಫೆಮಾದ ಸೆಕ್ಷನ್ 37 ಎ ಪ್ರಕಾರ ವಶಪಡಿಸಿಕೊಂಡ ₹ 89.19 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಲಾಗಿದೆ. 26/08/2024 ರ ತೀರ್ಪಿನ ಆದೇಶದ ಪ್ರಕಾರ ₹ 908 ಕೋಟಿ ದಂಡವನ್ನು ವಿಧಿಸಲಾಗಿದೆ” ಎಂದು ಇಡಿ ಹೇಳಿದೆ.