ಹೊಸದಿಲ್ಲಿ: ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದು ರಾಜಕೀಯ ಅಸ್ಥಿರತೆ ಮನೆ ಮಾಡಿರುವ ವೇಳೆ ಏರ್ ಇಂಡಿಯಾ ವಿಶೇಷ ವಿಮಾನ ಆರು ಶಿಶುಗಳು ಸೇರಿದಂತೆ 205 ಮಂದಿ ಭಾರತೀಯರನ್ನು ಬುಧವಾರ ಬೆಳಗ್ಗೆ ಢಾಕಾದಿಂದ ಹೊಸದಿಲ್ಲಿಗೆ ಕರೆತಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ಬಾಂಗ್ಲಾದೇಶದ ರಾಜಧಾನಿಗೆ ಟೇಕ್ ಆಫ್ ಆದ ಚಾರ್ಟರ್ಡ್ ಫ್ಲೈಟ್ ಅನ್ನು A321 ನಿಯೋ ವಿಮಾನದಲ್ಲಿ ಕರೆತರಲಾಗಿದೆ.
ವಿಮಾನದಲ್ಲಿ 199 ವಯಸ್ಕರು ಮತ್ತು ಆರು ಶಿಶುಗಳನ್ನು ಢಾಕಾದಿಂದ ಮರಳಿ ಕರೆತಂದಿದ್ದು ವಿಮಾನ ನಿಲ್ದಾಣದಲ್ಲಿ ಮೂಲಸೌಕರ್ಯ ಸವಾಲುಗಳ ನಡುವೆಯೂ ಯಾವುದೇ ಪ್ರಯಾಣಿಕರಿಲ್ಲದೆ ರಾಷ್ಟ್ರ ರಾಜಧಾನಿಯಿಂದ ಹಾರಿದ ವಿಮಾನವನ್ನು ಏರ್ ಇಂಡಿಯಾ ಬಹಳ ಕಡಿಮೆ ಸಮಯದಲ್ಲಿ ನಿರ್ವಹಿಸಿದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಅಧಿಕಾರಿ ತಿಳಿಸಿದ್ದಾರೆ.

