ಹೈದರಾಬಾದ್: ಚಿನ್ನ ಎಂದರೆ ಯಾರಿಗೆ ತಾನೆ ಆಸೆ ಇರುವುದಿಲ್ಲ. ಚಿನ್ನ ಧರಿಸುವುದರಲ್ಲಿ ಭಾರತ ಬೇರೆ ದೇಶಗಳಿಗಿಂತ ಮುಂದಿದೆ. ಇದೀಗ ತಿರುಪತಿ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಕುಟುಂಬವೊಂದು ಭೇಟಿ ನೀಡಿರುವ ವಿಡಿಯೋವೊಂದು ಅಸಾಮಾನ್ಯ ಕಾರಣಕ್ಕೆ ವೈರಲ್ ಆಗಿದೆ. ಕ್ಲಿಪ್‌ನಲ್ಲಿ, ಒಂದು ಕುಟುಂಬವು ಭಾರೀ ಚಿನ್ನಾಭರಣಗಳನ್ನು ಧರಿಸಿರುವುದನ್ನು ಕಾಣಬಹುದು. ಅವರು 25 ಕೆಜಿ ಚಿನ್ನದೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.
ಪುಣೆ ಮೂಲದ ಈ ಕುಟುಂಬವು ತಿರುಪತಿಗೆ ಭೇಟಿ ನೀಡಿದ್ದು, ಮೈ ಮೇಲೆ ಬರೋಬ್ಬರಿ 25 ಕೆಜಿ ಚಿನ್ನವನ್ನು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇಂದು ಮುಂಜಾನೆ ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ವೀಡಿಯೋದಲ್ಲಿ ನಾಲ್ವರ ಕುಟುಂಬವೊಂದು ಕೈಮುಗಿದು ನಿಂತಿರುವ ದೃಶ್ಯವಿದೆ. ಬಿಳಿಯ ವಸ್ತ್ರಗಳು ಮತ್ತು ಧೋತಿಗಳನ್ನು ಧರಿಸಿರುವ ಇಬ್ಬರು ಪುರುಷರು ಕುತ್ತಿಗೆಯಲ್ಲಿ ದಪ್ಪ ಸರಪಳಿಯಂತಹ ಚಿನ್ನ ಧರಿಸಿದ್ದಾರೆ. ಚಿನ್ನದ ಬಣ್ಣದ ಸೀರೆಯುಟ್ಟ ಮಹಿಳೆಯು ಸಂಪೂರ್ಣವಾಗಿ ಚಿನ್ನದ ಆಭರಣದಿಂದ ಮುಚ್ಚಲ್ಪಟ್ಟಿದ್ದಾರೆ. ಇವರ ಜೊತೆ ಒಂದು ಮಗು ನಿಂತಿರುವುದು ಸಹ ಕಂಡುಬರುತ್ತದೆ.
VIDEO | Andhra Pradesh: Devotees from Pune wearing 25 kg of gold visited Tirumala’s Venkateswara Temple earlier today.
(Full video available on PTI Videos – https://t.co/n147TvqRQz) pic.twitter.com/k38FCr30zE
— Press Trust of India (@PTI_News) August 23, 2024

