ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ದೆಹಲಿ ಪೊಲೀಸರು ಹೊಸ ಕ್ರಿಮಿನಲ್ ಕೋಡ್, ಭಾರತೀಯ ನ್ಯಾಯ ಸಂಹಿತಾ ಅಡಿ ಎಫ್ಐಆರ್ ದಾಖಲು ಮಾಡಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಬಗ್ಗೆ ಅವಹೇಳನಾಕಾರಿ ಫೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಸುಮಟೋ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಸಂಸದೆ ಮಹುವಾ ಮೊಯಿತ್ರಾ ಅವರು ತಮ್ಮ ಎಕ್ಸ್ ಅಕೌಂಟ್ನಲ್ಲಿ ಜುಲೈ 4 ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ರೇಖಾ ಶರ್ಮಾ ಬರುತ್ತಿರುವ ವಿಡಿಯೋ ಫೋಸ್ಟ್ ಮಾಡಿದ್ದರು. ತನ್ನ ಬಾಸ್ನ ಪೈಜಾಮಾ ಹಿಡಿದುಕೊಳ್ಳುವಲ್ಲಿ ನಿರತಳಾಗಿದ್ದಾರೆ ಎಂದು ಪೋಸ್ಟ್ಗೆ ಅಡಿಲೈನ್ ಬರೆದಿದ್ದರು.
ಇದಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಫೋಸ್ಟ್ ಡಿಲೀಟ್ ಮಾಡಿದ್ದರು. ಈ ಸಂಬಂಧ ಎಂಪಿ ಮೊಯಿತ್ರಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 79ರ ಅಡಿ ದೆಹಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಇನ್ನು ಎನ್‌ಸಿಡಬ್ಲ್ಯು ತನ್ನ ದೂರಿನಲ್ಲಿ, ಮೊಯಿತ್ರಾ ಅವರು ಮಾಡಿದ್ದು ಅಸಭ್ಯ ಟೀಕೆಗಳು ಅತ್ಯಂತ ಅತಿರೇಕವಾಗಿವೆ. ಘನತೆಯಿಂದ ಬದುಕುವ ಮಹಿಳೆಯರ ಹಕ್ಕ ಅನ್ನು ಉಲ್ಲಂಘನೆ ಆಗಿದೆ ಎಂದು ಪೋಸ್ಟ್ ಮಾಡಿದೆ. ಸದ್ಯ ಈ ಪೋಸ್ಟ್ಗೆ ಎಕ್ಸ್ನಲ್ಲೇ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸುಮಟೋ ಕೇಸ್ ಆಧಾರದ ಮೇಲೆ ನನ್ನನ್ನು ಅರೆಸ್ಟ್ ಮಾಡಲು ದೆಹಲಿ ಪೊಲೀಸರೇ ಬನ್ನಿ. ತಕ್ಷಣ ಕ್ರಮ ತೆಗೆದುಕೊಳ್ಳಲು ಮುಂದಿನ 3 ದಿನಗಳಲ್ಲಿ ನನ್ನನ್ನು ಅರೆಸ್ಟ್ ಮಾಡಲು ಆದಷ್ಟು ಬೇಗ ನಾಡಿಯಾಗೆ ಬನ್ನಿ. ನಾನೇ ಸ್ವತಃ ಕೊಡೆ ಹಿಡಿಯಬಲ್ಲೆ ಎಂದು ಹೇಳಿದ್ದಾರೆ.

