ವಯನಾಡ್: ಕೇರಳದ ವಯನಾಡ್ನಲ್ಲಿ ಸಂಭವಿಸಿರುವ ಭೀಕರ ಭೂಕುಸಿತದಲ್ಲಿ ಸಾವನಪ್ಪಿರುವ ಸಂಖ್ಯೆ 344ಕ್ಕೆ ಏರಿಕೆಯಾಗಿದೆ. ಕುಸಿದಿರುವ ಮನೆಗಳು ಹಾಗೂ ಅವಶೇಷಗಳಡಿ ಇನ್ನೂ ಜೀವಂತವಾಗುಳಿದಿರುವವರನ್ನು ಪತ್ತೆ ಹಚ್ಚಲು ಡೀಪ್ ಸರ್ಚ್ ರೇಡಾರ್ ಅನ್ನು ಬಳಸಲಾಗುತ್ತಿದೆ ಎಂದು ವರಿದಿಯಾಗಿದೆ.
ರಕ್ಷಣಾ ಕಾರ್ಯಚರಣೆಗೆ ನೆರವು ನೀಡಲು ಡೀಪ್ ಸರ್ಚ್ ರೇಡಾರ್‌ಗಳನ್ನು ರವಾನಿಸುವಂತೆ ಕೇಂದ್ರ ಸರಕಾರಕ್ಕೆ ಕೇರಳ ಸರಕಾರ ಮನವಿ ಮಾಡಿದೆ. ಶನಿವಾರ ಉತ್ತರ ಕಮಾಂಡ್ ನಿಂದ ಒಂದು ಕ್ಸೇವರ್ ರೇಡಾರ್ ಹಾಗೂ ದಿಲ್ಲಿಯ ತಿರಂಗ ಮೌಂಟೇನ್ ರೆಸ್ಕ್ಯೂ ಆರ್ಗನೈಸೇಷನ್ ನಿಂದ ನಾಲ್ಕು ರಿಕೋ ರಡಾರ್‌ಗಳನ್ನು ಭಾರತೀಯ ವಾಯು ಪಡೆ ಏರ್ ಲಿಫ್ಟ್ ಮೂಲಕ ವಯನಾಡ್‌ಗೆ ರವಾನಿಸಿವೆ.

