ವಯನಾಡ್: ಕೇರಳದಲ್ಲಿ ಭೂಕುಸಿತದ ಪರಿಣಾಮವಾಗಿ ಇಡೀ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಭೂಕುಸಿತದ ತೀವ್ರತೆಗೆ ನೂರಾರು ಜನ ಕಾಣೆಯಾಗಿದ್ದರೆ, ಸಾವಿನ ಸಂಖ್ಯೆ 93ಕ್ಕೆ ಏರಿಕೆಯಾಗಿದೆ.

ಕೇರಳ ಸಿಎಂ ಪಿಣರಾಯಿ ವಿಜಯಯನ್ ಅವರು ಸುದ್ದಿಗೋಷ್ಟಿ ನಡೆಸಿ ಭೂಕುಸಿತದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೇರಳದಲ್ಲಿ ಇಂದು ಮುಂಜಾನೆ 4.10ಕ್ಕೆ ಕಂಡು ಕೇಳರಿಯದ ಭೂ ಕುಸಿತ ಸಂಭವಿಸಿದೆ. ಸದ್ಯ 93 ಜನರ ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 128 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದಿದ್ದಾರೆ.

ವಯನಾಡ್​ ಜಿಲ್ಲೆಯ ಭೂಕುಸಿತ ಈಗ ಮುಂಡಕ್ಕಾಯಿ, ಚೋರಲ್ಮಾಲಾ, ಅತ್ತಮಲಾ ಹಾಗೂ ನೂರಪ್ಲೂಜಾವನ್ನು ಸಂಪೂರ್ಣವಾಗಿ ತತ್ತರಿಸುವಂತೆ ಮಾಡಿದೆ. ಈ ನಾಲ್ಕು ಪ್ರದೇಶಗಳಲ್ಲಿ ಕುಸಿದ ಭೂಮಿ ಮಹಾದುರಂತಕ್ಕೆ ಸಾಕ್ಷಿಯಾಗಿ ನಿಂತಿದೆ. ಹೀಗಾಗಿ ಯಾರಾದ್ರೂ ಭೂಕುಸಿದಿಂದಾಗಿ ಎಲ್ಲಾದರು ಸಿಲುಕಿಕೊಂಡಿದ್ದರೆ, ಸಹಾಯ ಬೇಕಾಗಿದ್ದರೆ ಕೇರಳ ಸರ್ಕಾರ ನೀಡಿರುವ ಈ ಟಾಲ್​ ಫ್ರೀ ನಂಬರ್​ಗೆ ಕಾಲ್ ಮಾಡಬಹುದು.

ತುರ್ತು ಸಹಾಯವಾಣಿ ವಿವರ: ಟಾಲ್ ಫ್ರೀ ನಂಬರ್ 1077ಗೆ ಕರೆ ಮಾಡಿ ಸಹಾಯ ಪಡೆಯಬಹುದು. ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರಕ್ಕೂ ಕೂಡ ಕರೆ ಮಾಡಿ ಸಹಾಯ ಪಡೆಯಬಹುದು. ಅದು ಬಿಡುಗಡೆ ಮಾಡಿರುವ ನಂಬರ್  04936204151, 9562804151, 8078409770

ಸುಲ್ತಾನ ಬತೇರಿ ಭಾಗದಲ್ಲಿ ಏನಾದರೂ ಸಹಾಯ ಬೇಕಾಗಿದ್ದಲ್ಲಿ ಈ ನಂಬರ್​ಗೆ ಕಾಲ್ ಮಾಡಿ ಸಹಾಯ ಪಡೆಯಬಹುದು: 04936223355, 623841385. ಮನತನವಾಡಿ ಭಾಗದಲ್ಲಿರುವವರಿಗೆ ಏನಾದರೂ ಸಹಾಯ ಬೇಕಾದಲ್ಲಿ ಈ ನಂಬರ್​ಗೆ ಸಂಪರ್ಕ ಮಾಡಿ 04935241111, 9446637748

ವೈತ್ರಿ ಭಾಗದಲ್ಲಿರುವ ಜನರಿಗೆ ಸಹಾಯ ಅವಶ್ಯಕತೆ ಇದ್ದಲ್ಲಿ ಈ ನಂಬರ್​ಗೆ ಕಾಲ್ ಮಾಡಿ 04936256100, 8590842965, 9447097705, ತುರ್ತು ವೈದ್ಯಕೀಯ ಸೇವೆಯ ಅವಶ್ಯಕತೆ ಇದ್ದಲ್ಲಿ ಈ ನಂಬರ್​ಗೆ ಕಾಲ್ ಮಾಡಿ 8086010833 ಮತ್ತು 9656938689

ವಯನಾಡ್ ಜಿಲ್ಲೆಯಲ್ಲಾಗಿರುವ ಭೀಕರ ಭೂಕುಸಿತ ರೈಲು ಸೇವೆಯ ಮೇಲೂ ಕೂಡ ಪರಿಣಾಮ ಬೀರಿದೆ. ವರುಣನ ಆರ್ಭಟ ಹಾಗೂ ಭೂಕುಸಿತ ಆ ಬದಿಯ ಟ್ರೇನ್​ಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ​

ದಕ್ಷಿಣ ರೈಲ್ವೆ ಪ್ರಮುಖವಾಗಿ ಮೂರು ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿದೆ. ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದಾಗಿ ಪ್ರಮುಖ ಮೂರು ರೈಲುಗಳು ಈ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಎರ್ನಾಕುಲಂ ಕನ್ನೂರು ಇಂಟರ್​​ಸಿಟಿ, ತಿರುವನವೇಲು ಪಲಕ್ಕಾಡು ಪಲಾರುವಿ ಎಕ್ಸ್​ಪ್ರೆಸ್ ಮತ್ತು ಶೋರನೂರು ವೆನದಾ ಎಕ್ಸ್​ಪ್ರೆಸ್ ರೈಲುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.