ಕೋಲ್ಕತಾ: ಅತ್ಯಾಚಾರ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಬಗ್ಗೆ ಪಶ್ಚಿಮಬಂಗಾಳದಲ್ಲಿ ಅತ್ಯಾ*ಚಾರ ನಿಗ್ರಹ ಮಸೂದೆಯನ್ನು ಜಾರಿಗೊಳಿಸುವುದಾಗಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಆಗಸ್ಟ್ 28) ಘೋಷಿಸಿದ್ದಾರೆ.
ಆಗಸ್ಟ್ 9ರಂದು ಕೋಲ್ಕತಾದ ಆರ್ ಜಿ ಮೆಡಿಕಲ್ ಕಾಲೇಜಿನ ಟ್ರೈನಿ ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಲೆಗೈದ ಘಟನೆ ವಿರುದ್ಧ ತೀವ್ರ ಪ್ರತಿಭಟನೆ ಆಕ್ರೋಶ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಹೇಳಿಕೆಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ನಾವು ರಾಜ್ಯದಲ್ಲಿ ಅತ್ಯಾ*ಚಾರ ನಿಗ್ರಹ ಕಾಯ್ದೆಯ ಮಸೂದೆಯನ್ನು ಪಾಸ್ ಮಾಡಲಿದ್ದು, ಈ ಹೊಸ ಮಸೂದೆಯಲ್ಲಿ ಇಂತಹ ಅಪರಾಧ ನಡೆದ ಏಳು ದಿನದೊಳಗೆ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಅವಕಾಶವಿರಲಿದೆ ಎಂದು ಬ್ಯಾನರ್ಜಿ ಹೇಳಿದರು.

