ಹರಿಯಾಣ: ಯಮುನಾನಗರದಲ್ಲಿ ಸಿನಿಮೀಯ ಮಾದರಿಯ ಕಳ್ಳತನವೊಂದು ನಡೆದಿದೆ. ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ವಾಹನವೊಂದು ರಸ್ತೆಯಲ್ಲಿ ಚಲಿಸುತ್ತಿದ್ದಾಗಲೇ, ಬೈಕ್‌ನಲ್ಲಿ ಬಂದ ಕಳ್ಳನೊಬ್ಬ ಅತ್ಯಂತ ವೇಗವಾಗಿ ಮತ್ತು ಆತ್ಮವಿಶ್ವಾಸದಿಂದ ಸಿಲಿಂಡರ್ ಎಗರಿಸಿದ್ದಾನೆ.
ಈ ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳನ ಚಾಕಚಕ್ಯತೆ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಯಾವುದೇ ಭಯವಿಲ್ಲದೆ, ಜನನಿಬಿಡ ರಸ್ತೆಯಲ್ಲೇ ನಡೆದ ಈ ಕೃತ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

