ಆಂಧ್ರಪ್ರದೇಶ:  ಜಾತಿ, ಧರ್ಮದ ಹೆಸರಿನಲ್ಲಿ ಒಬ್ಬರಿಗೊಬ್ಬರು ದ್ವೇಷ ಕಾರುತ್ತಿರುವ ಈ ಸಮಯದಲ್ಲಿ ಇಲ್ಲೊಂದು ಮುಸ್ಲಿಂ ಕುಟುಂಬ ಹನುಮಾನ್ ಮಂದಿರವನ್ನು ಕಟ್ಟಿ ಎಲ್ಲರಿಗೂ ಮಾದಿರಿಯಾಗಿದ್ದಾರೆ. ಪೂರ್ವಜರು ಕೊಟ್ಟ ಮಾತಿಗೆ ತಲೆದೂಗಿ ಈ ಕುಟುಂಬವು ಆಂಜನೇಯನ ದೇವಸ್ಥಾನವನ್ನು ನಿರ್ಮಿಸುತ್ತಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಕುಟುಂಬ 14 ವರ್ಷಗಳ ಹಿಂದೆಯೇ ಈ ಕಾಮಗಾರಿ ಆರಂಭಿಸಿತ್ತು, ಈಗಲೂ ಮುಂದುವರೆದಿದೆ. ಚಿತ್ತೂರು ಜಿಲ್ಲೆಯ ಪುಲಿಚೇರಲ್ ಮಂಡಲದ ಕೆ.ಕೊತ್ತಪೇಟ ಗ್ರಾಮದ ಫಿರೋಜ್ ಮತ್ತು ಚಾಂದ್ ಭಾಷಾ ಸಹೋದರರು ತಮ್ಮ ತಂದೆ ಅಜೀದ್ ಬಾಷಾ ಅವರ ಆಶಯದಂತೆ ಏಳು ದೇವಾಲಯಗಳ ಸಂಕೀರ್ಣದೊಂದಿಗೆ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ.

ಫಿರೋಜ್ ಮತ್ತು ಚಾಂದ್ ಬಾಷಾ ಅವರ ತಾತನಿಗೆ ಮಕ್ಕಳಿಲ್ಲದ ಕಾರಣ ಸ್ವಾಮೀಜಿಯೊಬ್ಬರ ಸಲಹೆ ಮೇರೆಗೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದರು. ಫಿರೋಜ್ ಮತ್ತು ಚಾಂದ್ ಬಾಷಾ ತಮ್ಮ ತಂದೆ ಅಜೀದ್ ಬಾಷಾ ಅವರು ತಮ್ಮ ಅಜ್ಜನ ಪೂಜೆಯ ಫಲವೆಂದು ಹೇಳುತ್ತಾರೆ. ಹಾಗಾಗಿ ತಂದೆಯ ಮಹತ್ವಾಕಾಂಕ್ಷೆಯಂತೆ ಈ ದೇವಾಲಯವನ್ನು ನಿರ್ಮಿಸುತ್ತಿರುವುದಾಗಿ ತಿಳಿಸಿದರು.