ಹಿಮಾಚಲ ಪ್ರದೇಶ: “ತನ್ನನ್ನು ಭೇಟಿಯಾಗಲು ಬರುವವರು ಖಡ್ಡಾಯವಾಗಿ ಆಧಾರ್ ಕಾರ್ಡ್ ತಮ್ಮೊಂದಿಗೆ ತರಬೇಕೆಂದು” ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದೆಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಹೇಳಿಕೆ ನೀಡಿದ್ದಾರೆ.
ಈ ಕುರಿತು ಸ್ವತಃ ಕಂಗನಾ ಅವರೇ ಪತ್ರಕರ್ತರೊಂದಿಗೆ ಹೇಳಿಕೆ ನೀಡಿದ್ದು ನನ್ನನ್ನು ಭೇಟಿಯಾಗಲು ಬರುವವರು ತಪ್ಪದೆ ಆಧಾರ್ ಕಾರ್ಡ್ ತರಬೇಕು ಜೊತೆಗೆ ತಾವು ಭೇಟಿ ನೀಡುವ ಉದ್ದೇಶದ ಕುರಿತು ಒಂದು ಪೇಪರ್ ನಲ್ಲಿ ಬರೆದು ತನ್ನಿ ಹೇಳಿದ್ದಾರೆ ಇದರಿಂದ ತನ್ನನ್ನು ಭೇಟಿಯಾಗುವ ಜನರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕ್ಷೇತ್ರದ ಸಮಸ್ಯೆ ಅಥವಾ ಇನ್ನಾವುದೇ ವಿಚಾರದ ಬಗ್ಗೆ ಮಾತನಾಡಲು ಸದಾ ನನ್ನ ಕಚೇರಿ ತೆರೆದಿರುತ್ತದೆ ನಮ್ಮ ರಾಜ್ಯದವರೇ ಆಗಿರಲಿ ಅಥವಾ ಹೊರಗಿನ ರಾಜ್ಯದವರು ಆಗಿರಲಿ ಯಾರೇ ಆದರೂ ಬರುವವರು ಆಯಾ ಪ್ರದೇಶದ ಆಧಾರ್ ಕಾರ್ಡ್ ಹೊಂದಿರುವುದು ಅಗತ್ಯ ಜೊತೆಗೆ ತಾವು ಭೇಟಿ ನೀಡುವ ಉದ್ದೇಶ ಏನು ಎಂಬುದನ್ನು ಪತ್ರದಲ್ಲಿ ನಮೂದಿಸಿದರೆ ಉತ್ತಮ ಎಂದಿದ್ದಾರೆ.
ಇತ್ತ ಕಂಗನಾ ಹೇಳಿಕೆ ನೀಡುತಿದ್ದಂತೆ ಮಂಡಿ ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದು ಜನಪ್ರತಿನಿಧಿ ಆದ ಬಳಿಕ ಎಲ್ಲ ಜನರನ್ನು ಭೇಟಿ ಮಾಡಬೇಕು ಇದು ಜನಪ್ರತಿನಿಧಿಯ ಕರ್ತವ್ಯ ಅದು ಬಿಟ್ಟು ಭೇಟಿ ಮಾಡಲು ಬರುವವರು ಆಧಾರ್ ಕಾರ್ಡ್ ಹಿಡಿದುಕೊಂಡು ಬರಬೇಕು ಎಂದರೆ ಇದಕ್ಕೆ ಅರ್ಥವಿಲ್ಲ ಎಂದು ಹೇಳಿದ ಅವರು ಸಾರ್ವಜನಿಕರು ನನ್ನನ್ನು ಭೇಟಿಯಾಗಲು ಬರುವುದಾದರೆ ಆಧಾರ್ ಕಾರ್ಡ್ ಅವಶ್ಯಕತೆ ಇಲ್ಲ ಎಂದು ಕಂಗನಾ ಅವರಿಗೆ ತಿರುಗೇಟು ನೀಡಿದ್ದಾರೆ.

