ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆ ಮಾಡಲಾಗಿದೆ. ನವೆಂಬರ್ 1, 2025 ರಿಂದಲೇ ಹೊಸ ದರಗಳು ಜಾರಿಗೆ ಬಂದಿವೆ.

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಈ ಬೆಲೆ ಕಡಿತ ಘೋಷಿಸಿದ್ದು, ಪ್ರತಿ ಸಿಲಿಂಡರ್ ಬೆಲೆಯಲ್ಲಿ 5 ರೂಪಾಯಿ ಕಡಿತ ಆಗಿದೆ. ದೇಶದ ವಿವಿಧ ಭಾಗಗಳಲ್ಲಿ 19 ಕೆಜಿ ತೂಕದ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಬೆಲೆ 1590.50 ರೂ.ಗೆ ಇಳಿದಿದೆ. ಈ ಹಿಂದೆ ಇದರ ಬೆಲೆ 1595.50 ರೂ. ಇತ್ತು. ಅಂದರೆ, ಪ್ರತಿ ಸಿಲಿಂಡರ್‌ಗೆ 5 ರೂಪಾಯಿಯಷ್ಟು ಕಡಿತಗೊಂಡಿದೆ.

ಕೋಲ್ಕತ್ತಾದಲ್ಲಿ 6.50 ರೂ. ಇಳಿಕೆಯಾಗಿದ್ದು, ಪ್ರತಿ ಸಿಲಿಂಡರ್‌ ಬೆಲೆ 1,694 ರೂ.ಗೆ ಮಾರಾಟವಾಗ್ತಿದೆ. ಚೆನ್ನೈನಲ್ಲಿ 1,750 ರೂ. (4.50 ರೂ. ಇಳಿಕೆ), ಮುಂಬೈನಲ್ಲಿ 1,542 ರೂ. (5 ರೂ. ಇಳಿಕೆ) ಗಳಿಗೆ ಮಾರಾಟ ವಾಗ್ತಿದೆ.