ಮುಂಬೈ: ಕಾಫಿ ಕುಡಿಯಲು ಹೋದ ಯುವಕನಿಗೆ ಜಿರಳೆ ಪತ್ತೆಯಾಗಿರುವ ಘಟನೆ ಮಲಾಡ್ ಮೂಲದ ಕೆಫೆಯೊಂದರಲ್ಲಿ ನಡೆದಿದೆ. ಸ್ಥಳೀಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಈವೆಂಟ್ ಮ್ಯಾನೇಜ್‌ಮೆಂಟ್ ವೃತ್ತಿಪರ ಪ್ರತೀಕ್ ರಾವತ್, ಸ್ನೇಹಿತನೊಂದಿಗೆ ಕಾಫಿ ಕುಡಿಯಲು ಮಹಾರಾಷ್ಟ್ರದ ಮಲಾಡ್ ರೆಸ್ಟೋರೆಂಟ್‌ಗೆ ಹೋದಾಗ ಈ ಘಟನೆ ನಡೆದಿದೆ. ಇಬ್ಬರೂ ಕೋಲ್ಡ್ ಕಾಫಿ ಆರ್ಡರ್ ಮಾಡಿದ್ದರು. ಆದರೆ ಕಾಫಿ ಕಹಿಯಿದ್ದ ಹಿನ್ನೆಲೆಯಲ್ಲಿ ವೆಟರ್‌ ಲೋಟಗಳನ್ನು ತೆಗೆದುಕೊಂಡು ಹೋಗಿ ಅದಕ್ಕೆ ಸಕ್ಕರೆ ಬೇರಸಿ ಹಿಂತಿರುಗಿಸಿದ್ದಾನೆ.

ಈ ವೇಳೆ ರಾವತ್‌ ತಮ್ಮ ಸ್ಟ್ರಾಗಳ ಮೂಲಕ ಕೋಲ್ಡ್ ಕಾಫಿ ಕುಡಿಯುತ್ತಿದ್ದರು. ಈ ವೇಳೆ ಗ್ಲಾಸ್‌ನಲ್ಲಿ ಏನೋ ಚಲಿಸುತ್ತಿರುವುದನ್ನು ನೋಡಿದ್ದಾರೆ. ಈ ವೇಳೆ ಅದು ಜಿರಳೆ ಎಂದು ಅರಿತುಕೊಂಡ ರಾವತ್‌ ಕೂಡಲೇ ವೇಟರ್‌ ಹಾಗೂ ರೆಸ್ಟೋರೆಂಟ್ ಮಾಲೀಕರ ಗಮನಕ್ಕೆ ತಂದರು. ಕಾಫಿ ತಯಾರಿಸಿದ ಶೇಕ್ ಅನ್ನು ತೋರಿಸಲು ಮಾಲೀಕರು ರಾವತ್ ಅವರನ್ನು ಅಡುಗೆಮನೆಗೆ ಕರೆದೊಯ್ದರು. ಅದರೆ ಅಲ್ಲಿ ಜಿರಳೆ ಅದರೊಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎನ್ನುವುದನ್ನು ಮಾಲೀಕರು ತೋರಿಸಿದರು.

ಘಟನೆಯ ಹಿನ್ನೆಲೆಯಲ್ಲಿ ರಾವತ್‌ ತನ್ನ ಗ್ಲಾಸ್‌ನಲ್ಲಿ ಜಿರಲೆಯ ಸಿಕ್ಕ ಫೋಟೋವನ್ನು ತೆಗೆದು, ಸ್ಥಳೀಯ ಮಲಾಡ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಆಹಾರದಲ್ಲಿ ಕಲಬೆರಕೆಯಾಗುವ ಅಪಾಯವನ್ನು ಉಲ್ಲೇಖಿಸಿ ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದರು.