ಆಂಧ್ರಪ್ರದೇಶ:ಕಾಲೇಜಿಗೆ ಹೋದಾಗ ಸ್ನಾಕ್ಸ್ ತಿನ್ನಬೇಕೆಂದು ಬೇಕರಿಗೆ ಹೋದಾಗ ಅಲ್ಲಿ ಎಗ್​​ ಪಫ್​ಗಾಗಿ ಸ್ನೇಹಿತರ ಜೊತೆ ಕಿತ್ತಾಡಿದ್ದು ಇರುತ್ತೆ. ಅಬ್ಬಬ್ಬಾ ಅಂದ್ರೆ ಎಗ್​ ಪಫ್​ ಎಷ್ಟು ತಿನ್ನುತ್ತೇವೆ 5 ಇಲ್ವೋ 10.ಆದರೆ ಆಂಧ್ರದ ಮಾಜಿ ಸಿಎಂ ಜಗನ್​ ಮೋಹನ್​ ರೆಡ್ಡಿ ಕೋಟಿ, ಕೋಟಿ ರೂಪಾಯಿ ಎಗ್​ ಪಫ್​ಗಳನ್ನ ತಿಂದ್ದಾರೆ ಎಂಬುದು ಅಚ್ಚರಿ ತಂದಿದೆ.

ಆಂಧ್ರಪ್ರದೇಶದ ಮಾಜಿ ಸಿಎಂ  ಸಿಎಂ ಜಗನ್​ ಮೋಹನ್ ರೆಡ್ಡಿಯವರು ಕಳೆದ 5 ವರ್ಷ ಅಂದರೆ 2019ರಿಂದ 2024ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.ಈ ವೇಳೆ ನೂರಾರು ಅಧಿಕಾರಿ, ಸಿಬ್ಬಂದಿ ಕೆಲಸ ಮಾಡಿದ್ದಾರೆ. ಆದರೆ 5 ವರ್ಷದಲ್ಲಿ ಕೇವಲ ಎಗ್​ಪಫ್​ಗಾಗಿ ಬರೋಬ್ಬರಿ 3 ಕೋಟಿ 60 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇಷ್ಟೊಂದು ಮೊತ್ತ ಖರ್ಚು ಆಗಿದ್ದು ತಿಳಿದು ರಾಜ್ಯದ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಐದು ವರ್ಷಕ್ಕೆ 3.60 ಕೋಟಿ ರೂ. ಎಗ್​ಪಫ್ ಎಂದರೆ ಒಂದು ವರ್ಷಕ್ಕೆ 71 ಲಕ್ಷ ರೂ. ಖರ್ಚು ಮಾಡಿದೆ. ಇದರ ಪ್ರಕಾರ ಒಂದು ದಿನಕ್ಕೆ 993 ಎಗ್​ಪಫ್ ಎಂದರೂ 20 ಸಾವಿರ ರೂ.ಗಳನ್ನು ವೆಚ್ಚ ಮಾಡಿದೆ. 5 ವರ್ಷದಲ್ಲಿ 18 ಲಕ್ಷ ಎಗ್​ ಪಫ್​ ತಿಂದಿದ್ದಾರಂತೆ. ಅಲ್ಲದೇ ಇದರ ಜೊತೆ ಕಾಫಿ, ಟೀಗಳಲ್ಲ ಲೆಕ್ಕ ಮಾಡಿದರೆ ಖರ್ಚು ಇನ್ನು ದುಪ್ಪಟ್ಟು ಆಗುತ್ತೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆದಿದೆ.