ನ್ಯೂಯಾರ್ಕ್: ಇಂದಿನ ಯುವಪೀಳಿಗೆ ಒಂದಲ್ಲಾ ಒಂದು ಸಾಹಸಕ್ಕೆ ಕೈ ಹಾಕುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಅನೇಕ ವಿಷಯಗಳು ನೋಡಲು ಸಿಗುತ್ತವೇ ಇದೀಗ ಯುವಕನೋರ್ವ 102 ಅಂತಸ್ತಿನ ಕಟ್ಟಡದ ತುದಿಗೆ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಈ ದೃಶ್ಯ ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ.

ನ್ಯೂಯಾರ್ಕ್ ನಗರದಲ್ಲಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೇಲೆ ಹತ್ತಿ ಈ ಸಾಹಸ ಮಾಡಿದ್ದಾನೆ. ಕಟ್ಟದ ತುದಿಯಲ್ಲಿ ಅಳವಡಿಸಿರುವ ಆ್ಯಂಟಿನಾ ಮೇಲೆ ಹತ್ತಿ ಎರಡೂ ಕೈಗಳನ್ನು ಬಿಟ್ಟು ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಸೆಲ್ಫಿ ಸ್ಟಿಕ್ ಹಿಡಿದು ಕಟ್ಟಡದ ಮೇಲೆ ಹತ್ತಿದ ಈ ಸಾಹಸ ಮಾಡಿದ್ದಾನೆ. livejn ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

https://www.instagram.com/reel/C97U6SXOoJn/?igsh=cmx1ejN1anAzcmZ2

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ” ವಿಡಿಯೋ ನೋಡಿದರೆ ಕೈಕಾಲು ನಡುಗುತ್ತಿದೆ” ಎಂದು ನೆಟ್ಟಿಗರು ಕಾಮೆಂಟ್​​​​ ಮಾಡಿದ್ದಾರೆ.