ನವದೆಹಲಿ: ಸಾರ್ವಜನಿಕ ರ‍್ಯಾಲಿಯಲ್ಲಿ ವೇದಿಕೆಯ ಮೇಲೆ ಹಲವಾರು ಮಹಿಳೆಯರೊಂದಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೃತ್ಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಮತಾ ಬ್ಯಾನರ್ಜಿ ಭಾಗವಹಿಸಿದ್ದ ರ‍್ಯಾಲಿ ಮುಕ್ತಾಯವಾಗುತ್ತಿದ್ದಂತೆ, ಅವರು ವೇದಿಕೆಯಲ್ಲಿ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಮಹಿಳಾ ಕಾರ್ಯಕರ್ತರೊಂದಿಗೆ ಸೇರಿಕೊಂಡು ಸಾಂಪ್ರದಾಯಿಕ ಗೀತೆಗೆ ಡ್ಯಾನ್ಸ್ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ಮಹಿಳೆಯರೊಂದಿಗೆ ನಿಂತು ಕಾಲು ಕುಣಿಸುತ್ತಾ, ಅವರ ಕೈ ಹಿಡಿದು ಹೆಜ್ಜೆ ಹಾಕುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಂತರ ಅವರು ವೇದಿಕೆಯಿಂದ ಕೆಳಗಿಳಿದು, ಡ್ಯಾನ್ಸ್ ಮಾಡಲು ತನ್ನನ್ನು ಹುರಿದುಂಬಿಸಿದ ಸಭಿಕರತ್ತ ಕೈ ಬೀಸಿದರು.
#WATCH | West Bengal CM Mamata Banerjee joins a few women as they dance together on stage, at her public rally in South 24 Parganas.#LokSabhaElections2024 pic.twitter.com/ZhSNC2ZZLj
— ANI (@ANI) May 29, 2024

