ಮುಂಬೈ: ಛತ್ರಪತಿ ಶಿವಾಜಿ ಮಹಾರಾಜರು ಬಳಸುತ್ತಿದ್ದ ‘ವಾಘ್ ನಖ್’ ಅಥವಾ ಹುಲಿ ಉಗುರಿನ ಆಕಾರದ ಆಯುಧ ಲಂಡನ್ ಮ್ಯೂಸಿಯಂನಿಂದ ಮುಂಬೈಗೆ ಆಗಮಿಸಿದೆ. ಲಂಡನ್​ನಿಂದ ತರಿಸಲಾದ ಈ ಪುರಾತನ ಕಾಲದ ಆಯುಧಕ್ಕೆ ಬುಲೆಟ್ ಪ್ರೂಫ್ ಕವರ್ ಹಾಕಿ ತರಲಾಗಿತ್ತು. ಇದನ್ನು ಜುಲೈ 19ರಿಂದ 7 ತಿಂಗಳ ಕಾಲ ಸತಾರಾದಲ್ಲಿರುವ ಮ್ಯೂಸಿಯಂನಲ್ಲಿ ಇರಿಸಲಾಗುವುದು.

ಈಗಾಗಲೇ ಮುಂಬೈಗೆ ಆಗಮಿಸಿರುವ ವಾಘ್ ನಖ್ ಅನ್ನು ಈಗ ಪಶ್ಚಿಮ ಮಹಾರಾಷ್ಟ್ರದ ಸತಾರಾಕ್ಕೆ ಕೊಂಡೊಯ್ಯಲಾಗುವುದು. ಅಲ್ಲಿ ಅದನ್ನು ಜುಲೈ 19ರಿಂದ ಪ್ರದರ್ಶಿಸಲಾಗುವುದು.ಈ ಹುಲಿ ಉಗುರಿನ ಆಕಾರದ ಶಿವಾಜಿಯ ಆಯುಧವನ್ನು ಬುಧವಾರ ಲಂಡನ್ ಮ್ಯೂಸಿಯಂನಿಂದ ಮುಂಬೈಗೆ ತರಲಾಗಿದೆ. ಲಂಡನ್‌ನಿಂದ ತರಿಸಲಾದ ಆಯುಧಕ್ಕೆ ಬುಲೆಟ್ ಪ್ರೂಫ್ ಕವರ್ ಇದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮಹಾರಾಷ್ಟ್ರದ ಸಚಿವರು ತಿಳಿಸಿದ್ದಾರೆ