ಹೈದರಾಬಾದ್:  ರಾಮೋಜಿ ಫಿಲ್ಮ್ ಸಿಟಿ ಮತ್ತು ಈಟಿವಿ ನೆಟ್‌ವರ್ಕ್‌ನ ಸಂಸ್ಥಾಪಕ 87 ವರ್ಷದ ರಾಮೋಜಿ ರಾವ್ ಅವರು ಶನಿವಾರ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಟಿಡಿಪಿ  ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಭಾನುವಾರ ಪಾಲ್ಗೊಂಡರು. ಪಾರ್ಥೀವ ಶರೀರ ಒಯ್ಯುವ ವೇಳೆ ಚಂದ್ರಬಾಬು ಅವರು ಕೂಡ ಹೆಗಲು ಕೊಟ್ಟಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನಾಯ್ಡು ಅವರು ರಾಮೋಜಿ ಅವರ ಪಾರ್ಥಿವ ಶರೀರವನ್ನು ಸಾಗಿಸಲು ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸೇರಿಕೊಂಡರು. ಅಂತ್ಯಕ್ರಿಯೆಯ ಸ್ಥಳದಲ್ಲಿ ಅಭಿಮಾನಿಗಳು, ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಅಂತಿಮ ನಮನ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದಾಗ ರಾಜಕೀಯ ನಾಯಕ ನಾಯ್ಡು ಅವರು ಮೆರವಣಿಗೆಯನ್ನು ಮುನ್ನಡೆಸಿದರು ಎನ್ನಲಾಗಿದೆ.