ಪುಣೆಯಲ್ಲಿ ನಡೆದ ಪೋರ್ಷೆ ಕಾರು ಅಪಘಾತ ಪ್ರರಕರಣ ದಿನದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.ಅಪ್ರಾಪ್ತ ಆರೋಪಿ ವೇದಾಂತ್ ರಕ್ತದ ಮಾದರಿಯನ್ನು ಬದಲಾಯಿಸಲು ಆಸ್ಪತ್ರೆ ಸಿಬ್ಬಂದಿಗೆ 3 ಲಕ್ಷ ರೂ ಕೊಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಆರೋಪಿಯನ್ನು ನಿರಪರಾಧಿ ಎಂದು ಸಾಭೀತು ಪಡಿಸಲು ಈ ಮೋಸದ ಕೃತ್ಯವೆಸಗಿದ್ದಾರೆ. ಆತನ ನಿಜವಾದ ರಕ್ತದ ಮಾದರಿಯನ್ನು ಡಸ್ಟಬಿನ್‌ಗೆ ಎಸದು, ಕಳಪೆ ಮಾದರಿಯನ್ನು ಬದಲಾಯಿಸಿದ್ದಾರೆ. ರಕ್ತ ಪರೀಕ್ಷೆಯಲ್ಲಿ ಆಲ್ಕೋಹಾಲ್ ಅಂಶ ಇಲ್ಲ ಎಂದು ಸಾಭೀತು ಪಡಿಸಲು ಈ ಕೃತ್ಯ ಎಸಗಲಾಗಿದೆ.
ಈ ಸಂಬಂಧ ಆಸ್ಪತ್ರೆ ಇಬ್ಬರ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರೀಕ್ಷಾ ವರದಿಯಲ್ಲಿ ಆತನ ರಕ್ತದಲ್ಲಿ ಆಲ್ಕೋಹಾಲ್ ಇರಲಿಲ್ಲ ಎನ್ನುವ ವಿಚಾರ ಪೊಲೀಸರಿಗೆ ಆಶ್ಚರ್ಯ ಮೂಡಿಸಿತ್ತು.
ಮೇ 19ರಂದು ಕುಡಿದ ಮತ್ತಿನಲ್ಲಿ ವೇದಾಂತ್ ಅಗರ್ವಾಲ್ ತನ್ನ ಐಷಾರಾಮಿ ಪೋರ್ಷೆ ಕಾರು ಓಡಿಸಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂಬಂಧ ವೇದಾಂತ್‌ನನ್ನು ಪೊಲೀಸರು ಬಂಧಿಸಿದ್ದರು.

