ಮುಂಬೈ : ತಾಜ್‌ ಹೋಟೆಲ್‌ ಗೆ ದುಷ್ಕರ್ಮಿಗಳು ಬಾಂಬ್‌ ಬೆದರಿಕೆ ಒಡ್ಡಿರುವ ಘಟನೆ ಶನಿವಾರ ನಡೆದಿದೆ.

ದುಷ್ಕರ್ಮಿಗಳು ಮುಂಬೈ ಪೊಲೀಸರಿಗೆ ಇ-ಮೇಲ್‌ ಮೂಲಕ ಬೆದರಿಕೆ ಒಡ್ಡಿದ್ದು, ಹೋಟೆಲ್‌ ಅನ್ನು ಬಾಂಬ್‌ ಇಟ್ಟು ಉಡಾಯಿಸುವುದಾಗಿ ಹೇಳಿದ್ದರು.

ಪೊಲೀಸರು ಈ ಮಿಂಚಂಚೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪೊಲೀಸ್‌ ಹಾಗೂ ಬಾಂಬ್‌ ಪತ್ತೆ ನಿಷ್ಕ್ರಿಯದಳದ ಅಧಿಕಾರಿಗಳು ಹೋಟೆಲ್‌ ಗೆ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಿಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ಹುಸಿಬೆದರಿಕೆ ಎಂದು ಕಂಡು ಬಂದಿದೆ.