ಮಹಾರಾಷ್ಟ್ರ: ಗಂಡ, ಹೆಂಡತಿ, ಇಬ್ಬರು ಪುತ್ರರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಬುಧವಾರ (ಸೆ.2) ರಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಮೃತರನ್ನು ನಿವೃತ್ತ ಶಿಕ್ಷಕ ವಿಜಯ್ ಮಧುಕರ್ ಪಚೋರಿ (68), ಅವರ ಪತ್ನಿ ಮಾಲಾ (55) ಮತ್ತು ಅವರ ಮಕ್ಕಳಾದ ಗಣೇಶ್ (38) ಮತ್ತು ದೀಪಕ್ (36) ಎಂದು ಗುರುತಿಸಲಾಗಿದೆ.ಕೆಲ ದಿನಗಳಿಂದ ಮನೆಯವರು ನೆರೆಹೊರೆಯವರಿಗೆ ಕಾಣದೇ ಇದ್ದುದರಿಂದ ಅನುಮಾನಗೊಂಡ ಅಕ್ಕಪಕ್ಕದ ಮನೆಯವರು ಮಧುಕರ್ ಅವರ ಮನೆಯ ಬಾಗಿಲು ಬಡಿದಿದ್ದಾರೆ ಆದರೆ ಮನೆಯೊಳಗಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಕೂಡಲೇ ಬಂದ ಪೊಲೀಸರು ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ ಈ ವೇಳೆ ನಾಲ್ವರು ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ಇದರಲ್ಲಿ ವಂಚನೆ ಪ್ರಕರಣನವೊಂದಕ್ಕೆ ಸಂಬಂಧಿಸಿ ಮಧುಕರ್ ಅವರ ಪುತ್ರನಾದ ಗಣೇಶ್ ನನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದರು ಈ ಕಾರಣಕ್ಕೆ ಕುಟುಂಬ ಸದಸ್ಯರು ಮನನೊಂದು ಈ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರದಲ್ಲಿ ಬರೆದುಕೊಂಡು ನಾಲ್ವರು ಸಹಿ ಹಾಕಿದ್ದಾರೆ.