ಮುಂಬೈ: ಮಹಿಳೆಯೊಬ್ಬಳ ಸಾವಿಗೆ ಕಾರಣವಾಗಿದ್ದ ಬಿಎಂಡಬ್ಲ್ಯೂ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗೆ ಮದ್ಯ ನೀಡಿದ್ದ ಮುಂಬೈನ ಪಬ್‍ನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಪಬ್‍ನ್ನು ಸೀಲ್ ಮಾಡಿದ್ದರು. ಇದಾದ 24 ಗಂಟೆಗಳಲ್ಲಿ ಅಧಿಕಾರಿಗಳು ಪಬ್ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗಿಸಿದ್ದಾರೆ. ಪಬ್ 25 ವರ್ಷ ವಯಸ್ಸಿನ ಮತ್ತು ಕುಡಿಯಲು ಕಾನೂನುಬದ್ಧ ವಯೋಮಿತಿಗಿಂತ ಕಡಿಮೆ ವಯಸ್ಸಿನ ಆರೋಪಿ ಮಿಹಿರ್ ಶಾಗೆ (24) ಮದ್ಯವನ್ನು ನೀಡಿದೆ.
ಅಲ್ಲದೇ ಸರಿಯಾದ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡಿದ್ದು ಕಂಡು ಬಂದಿದೆ. ಬಾಂಬೆ ವಿದೇಶಿ ಮದ್ಯದ ನಿಯಮಗಳ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

