ನವದೆಹಲಿ: ಕೋಲ್ಕತಾ ವೈದ್ಯೆ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘಟನೆ ವಿರುದ್ಧ ದೇಶದ ಮೂಲೆ ಮೂಲೆಯಲ್ಲಿ ಪ್ರತಿಭಟೆಗಳು ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣ ವಿಚಾರಣೆ ನಡೆಸಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇದೀಗ ಪ್ರತಿಭಟನೆ ತೀವ್ರಗೊಂಡಿದೆ. ಇಂದು ದೇಶದಲ್ಲಿ ಮಹಿಳೆಯರು ವಿಶೇಷ ಅಭಿಯಾನ ಆರಂಭಿಸಿದ್ದಾರೆ. ತಮ್ಮ ವ್ಯಾಟ್ಸಾಪ್ ಡಿಪಿಗಳನ್ನು ಬದಲಿಸಿ ಮೌನ ಪ್ರತಿಭಟನೆ ಸಾರಿದ್ದಾರೆ. ಬ್ಲಾಕ್ ಡಿಪಿ ಡೇ ಅನ್ನೋ ಅಭಿಯಾನ ಆರಂಭಿಸಲಾಗಿದ್ದು, ಮಹಿಳೆಯರು ಕಪ್ಪು ಬಿಳುಪು ಮೊಂಬತಿ ಚಿತ್ರವನ್ನು ಡಿಪಿಯಾಗಿ ಬದಲಿಸಲು ಮನವಿ ಮಾಡಲಾಗಿದೆ. ಇಂದು ರಾತ್ರಿ 9 ಗಂಟೆವರೆಗೆ ಈ ಅಭಿಯಾನ ನಡೆಯಲಿದೆ.
ಕೋಲ್ಕತಾ ಅತ್ಯಾಚಾರ ಪ್ರಕರಣದ ವಿರುದ್ದ ಪ್ರತಿಭಟಿಸುವಂತೆ ಎಲ್ಲರಲ್ಲೂ ವಿನಂತಿ ಮಾಡಲಾಗಿದೆ. ವಿಶೇಷವಾಗಿ ಮಹಿಳೆಯರು ಬ್ಲಾಕ್ ಡಿಪಿಯನ್ನು ಆಚರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಹುತೇಕ ಮಹಿಳೆಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ

