ಹೊಸದಿಲ್ಲಿ: ಜಮ್ಮು ಕಾಶ್ಮೀರ ಚುನಾವಣೆಗೆ ಸೋಮವಾರ ಅಭ್ಯರ್ಥಿಗಳ ಪಟ್ಟಿಯನ್ನೊಮ್ಮೆ ಬಿಡುಗಡೆ ಮಾಡಿ ಮತ್ತೆ ಹಿಂಪಡೆದು ತುಸು ಸಮಯದ ಬಳಿಕ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದ್ದ ಭಾರತೀಯ ಜನತಾ ಪಕ್ಷವು ಮಂಗಳವಾರ (ಆ.27) ಎರಡನೇ ಪಟ್ಟಿ ರಿಲೀಸ್ ಮಾಡಿದೆ.
ಸೋಮವಾರ ಪರಿಷ್ಕೃತ ಪಟ್ಟಿಯಲ್ಲಿ 15 ಮಂದಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಇದೀಗ ಮತ್ತೆ 29 ಮಂದಿ ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಲಾಗಿದೆ. ಹೀಗಾಗಿ 90 ವಿಧಾನಸಭೆ ಕ್ಷೇತ್ರಗಳ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ 44 ಹೆಸರು ಅಂತಿಮಗೊಳಿಸಿದೆ.
ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯು ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ಮೂರು ಹಂತಗಳಲ್ಲಿ ನಡೆಯಲಿದೆ. ಮತಗಳ ಎಣಿಕೆಯನ್ನು ಅಕ್ಟೋಬರ್ 4 ರಂದು ನಿಗದಿಪಡಿಸಲಾಗಿದೆ.

