ಹೈದರಾಬಾದ್: ಯುವಕರು ಬುರ್ಖಾ ಧರಿಸಿ ಬೈಕ್ ಸ್ಟಂಟ್ ಮಾಡಿದ ಹಿನ್ನಲೆಯಲ್ಲಿ , ತಮ್ಮ ಕಾರ್ಯಗಳನ್ನು ಚಿತ್ರೀಕರಿಸಿದ ಮತ್ತು ಇದೆಲ್ಲವನ್ನೂ ಮಾಡಿದ್ದ ನಗರದ ಐವರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಅವರೆಲ್ಲರೂ ಬುರ್ಖಾ ಧರಿಸಿ ಬೈಕ್‍ನಲ್ಲಿ ಸ್ಟಂಟ್ ಮಾಡಿದ್ದಾರೆ ಮಾತ್ರವಲ್ಲದೇ , ಅದನ್ನು ರೆಕಾರ್ಡ್ ಮಾಡಿ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದರು. ಇದು ವೈರಲ್ ಆಗಿದೆ. ಹೈದರಾಬಾದ್ ಪೊಲೀಸರು ಈ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳನ್ನು ಗಮನಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಈ ಯುವಕರನ್ನು ಬಂಧಿಸಿದ್ದಾರೆ.