ಭಾರತ: ಹಣಕ್ಕಾಗಿ ಎಟಿಎಂ ಬಳಸುವ ಕಾಲ ಹೋಗಿ, ಈಗ ಗ್ಯಾಸ್ ಸಿಲಿಂಡರ್‌ಗಳಿಗೂ ಎಟಿಎಂ ಬಂದಿದೆ. ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ತನ್ನ ‘ಭಾರತ ಗ್ಯಾಸ್’ ಗ್ರಾಹಕರಿಗಾಗಿ ದೇಶದ ಮೊದಲ ಎಲ್‌ಪಿಜಿ ಎಟಿಎಂ ಅನ್ನು ಲೋಕಾರ್ಪಣೆ ಮಾಡಿದೆ.
ಈ ಸ್ವಯಂಚಾಲಿತ ಯಂತ್ರದ ಮೂಲಕ ಗ್ರಾಹಕರು ಯಾವುದೇ ಏಜೆನ್ಸಿಗೆ ಹೋಗದೆ ಅಥವಾ ಬುಕಿಂಗ್ ಮಾಡಿ ದಿನಗಟ್ಟಲೆ ಕಾಯದೆ, ಕೇವಲ 2 ನಿಮಿಷಗಳಲ್ಲಿ ಸಿಲಿಂಡರ್ ಪಡೆಯಬಹುದು. ಇದು ಪ್ರಾಯೋಗಿಕವಾಗಿ ಆರಂಭವಾಗಿದ್ದು, ಶೀಘ್ರದಲ್ಲೇ ದೇಶಾದ್ಯಂತ ವಿಸ್ತರಣೆಯಾಗುವ ನಿರೀಕ್ಷೆಯಿದೆ.

