ಕೋಲ್ಕತ್ತಾ: ಬಂಗಾಳಿ ನಟಿ ಪಾಯಲ್​ ಮುಖರ್ಜಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಕೋಲ್ಕತ್ತಾದ ಸದರ್ನ್​​​ ಅವೆನ್ಯೂ ಪ್ರದೇಶದಲ್ಲಿ ನಡೆದಿದೆ.

ನಡೆದಿದೆ. ಶುಕ್ರವಾರದಂದು ಕಾರಿನಲ್ಲಿ ಸಂಚರಿಸುವ ವೇಳೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮೃಗೀಯ ರೀತಿ ವರ್ತಿಸಿದ್ದಾರೆ. ಸದ್ಯ ಈ ಘಟನೆಯಿಂದ ನೊಂದ ನಟಿ ವಿಡಿಯೋ ರೆಕಾರ್ಡ್​​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದುಷ್ಕರ್ಮಿಗಳು ಕಾರಿನ ಗಾಜನ್ನು ಒಡೆದಿದ್ದಾರೆ. ನಟಿ ವಿಡಿಯೋದಲ್ಲಿ ದುಷ್ಕರ್ಮಿಗಳ ದಾಳಿಯಿಂದ ಡ್ಯಾಮೇಜ್​ ಆದ ಕಾರಿನ ದೃಶ್ಯವನ್ನು ತೋರಿಸಿದ್ದಾಳೆ. ಜೊತೆಗೆ ಅವರ ವರ್ತನೆಯ ಬಗ್ಗೆಯೂ ವಿವರಿಸಿದ್ದಾಳೆ. ದುಷ್ಕರ್ಮಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ವಿಡಿಯೋದಲ್ಲಿ ಒತ್ತಾಯಿಸಿದ್ದಾಳೆ.

ನಟಿ ಪಾಯಲ್​ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅನೇಕರು ಈ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ಸುರಕ್ಷತಾ ಕಡಿಮೆ ಇದೆ ಎಂದು ಕಿಡಿಕಾರಿದ್ದಾರೆ.