ಹೊಸದಿಲ್ಲಿ: ಕೋಲ್ಕತಾ ಟ್ರೈನಿ ವೈದ್ಯೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವುದಾಗಿ ಆರೋಪಿ ಸಂಜಯ್ ರಾಯ್ ಸುಳ್ಳು ಪತ್ತೆ ಪರೀಕ್ಷೆಯಲ್ಲಿ ಒಪ್ಪಿಕೊಂಡಿ ರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ.
ವೈದ್ಯೆಯ ಕೊಲೆ ನಡೆಸುವ ಮುಂಚೆ ಸಂಜಯ್ ತನ್ನ ಸ್ನೇಹಿತನ ಜತೆಗೂಡಿ ಕೋಲ್ಕತಾದ 2 ರೆಡ್‌ಲೈಟ್ ಪ್ರದೇಶಗಳಿಗೆ ಭೇಟಿ ನೀಡಿದ್ದ. ಆದರೆ ಸೆಕ್ಸ್ ಮಾಡಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಮೊದಲು ಸೋನಾಗಚಿ ರೆಡ್‌ಲೈಟ್‌ಗೆ ಸ್ನೇಹಿತನ ಜತೆಗೂಡಿ ಹೋದೆ. ಆದರೆ ಅಲ್ಲಿ ಯಾವುದೇ ಉಪಯೋಗವಾಗದ್ದರಿಂದ ಬಳಿಕ ಮತ್ತೂಂದು ರೆಡ್ ಲೈಟ್ ಏರಿಯಾ ಚೆಟ್ಲಾಗೆ ಹೋದೆವು. ಅಲ್ಲಿಗೆ ಹೋಗು ವಾಗ ದಾರಿ ಮಧ್ಯೆ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದೆವು.
ಚೆಟ್ಲಾದಲ್ಲಿ ನನ್ನ ಸ್ನೇಹಿತ ಸೆಕ್ಸ್ ಮಾಡಿದ. ಈ ವೇಳೆ ನಾನು, ನನ್ನ ಗೆಳತಿಗೆ ವೀಡಿಯೋ ಕಾಲ್ ಮಾಡಿ, ಬೆತ್ತಲೆ ಫೋಟೋ ಕಳುಹಿಸುವಂತೆ ಕೇಳಿದೆ. ಅವಳು ತನ್ನ ಬೆತ್ತಲೆ ಫೋಟೋ ಕಳುಹಿಸಿದಳು. ಬಳಿಕ ಅಲ್ಲಿಂದ ನೇರವಾಗಿ ಆರ್‌ಜಿ ಕಾರ್ ಆಸ್ಪತ್ರೆಗೆ ಬಂದೆವು. ನಾನು ನೇರವಾಗಿ 4ನೇ ಅಂತಸ್ತಿಗೆ ಹೋದೆ. ಅಲ್ಲಿನ ಸೆಮಿನಾರ್ ಹಾಲ್‌ನಲ್ಲಿ ಮಲಗಿದ್ದ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿ ಸೀದಾ ಸ್ನೇಹಿತ ಎಎಸ್‌ಐ ಮನೆಗೆ ಹೋದೆ ಎಂದು ಆರೋಪಿ ಸಂಜಯ್ ಹೇಳಿದ್ದಾನೆ. ಆರೋಪಿ ಹೇಳಿದ ವಿಷಯಗಳು ಅಷ್ಟೂ ದೃಢಪಟ್ಟಿವೆ ಎನ್ನಲಾಗಿದೆ. ಹಾಗಿದ್ದೂ, ಅನೇಕ ವಿಷಯಗಳಲ್ಲಿ ಆತ ಸುಳ್ಳು ಹೇಳಿದ್ದಾನೆ ಎನ್ನಲಾಗಿದೆ. ಈತನ ಮೊಬೈಲ್‌ನಲ್ಲಿ ಸಾಕಷ್ಟು ಅಶ್ಲೀಲ ವೀಡಿಯೋಗಳ ಚಿತ್ರಿಕೆಗಳಿದ್ದವು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

