ಅಮರಾವತಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರಕುಸಿತ ಆಗಿರುವ ಕಾರಣ ಆಂಧ್ರ ಪ್ರದೇಶದ ಹಲವು ಕಡೆಗಳಲ್ಲಿ ಕಳೆದ 24 ಗಂಟೆಯಲ್ಲಿ ಭಾರೀ ಪ್ರಮಾಣ ದಲ್ಲಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತ ಗೊಂಡಿದೆ. ವಿಜಯವಾಡಸೇರಿ ಅನೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. 7 ಜನರು ಮಳೆ ಸಂಬಂಧಿ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ವಿಜಯವಾಡದಲ್ಲಿ ಭೂಕುಸಿತದ ಕಾರಣ ನಾಲ್ವರು ಸಾವನ್ನಪ್ಪಿದ್ದಾರೆ.
ಗುಂಟೂರಿನಲ್ಲಿ ತೊರೆ ಉಕ್ಕೇರಿ ಬಂದ ಕಾರಣ ನಡೆದು ಹೋಗುತ್ತಿದ್ದ ವಿದ್ಯಾ ರ್ಥಿಗಳು ಹಾಗೂ ಒಬ್ಬ ಶಿಕ್ಷಕ ಸಾವನ್ನಪ್ಪಿದ್ದಾರೆ. ವಾಯುಭಾರ ಕುಸಿತದಿಂದ ಅನೇಕ ಕಡೆ ಮಳೆ ತೀವ್ರಗೊಂಡಿದ್ದು, ಮಚಿಲಿಪಟ್ಟಣಂ, ಮಂಗಳಗಿರಿ, ಅಮರಾವತಿ ಸೇರಿ ಅನೇಕ ಕಡೆ 10ರಿಂದ 18 ಸೆಂ.ಮೀ. ಮಳೆ ಸುರಿದಿದೆ. ಒಡಿಶಾ, ಆಂಧ್ರದಲ್ಲಿ ಮುನ್ನೆಚ್ಚರಿಕೆ: ವಾಯುಭಾರ ಕುಸಿತದ ಕಾರಣ ಒಡಿಶಾ ಹಾಗೂ ಆಂಧ್ರ ಪ್ರದೇಶದಲ್ಲಿ ಮಳೆ 1-2 ದಿನ ಮುಂದುವರೆಯಬಹುದು ಎ೦ದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

