ಕೋಲ್ಕತ್ತಾ: ಮಂಗಳವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರವು ಮಂಡಿಸಲಿರುವ ಅತ್ಯಾಚಾರ-ವಿರೋಧಿ ಮಸೂದೆಯ ಕರಡು ಪ್ರತಿಯಲ್ಲಿ, ಅತ್ಯಾಚಾರದ ಅಪರಾಧಿಗಳು ಸಂತ್ರಸ್ತರ ಸಾವಿಗೆ ಕಾರಣವಾದರೆ ಅಥವಾ ಕೋಮಾದಂಥಾ ಸ್ಥಿತಿಗೆ ಕಾರಣವಾದರೆ, ಅಪರಾಧಿಗೆ ಮರಣದಂಡನೆ ವಿಧಿಸಬೇಕು ಎಂದು ಹೇಳುತ್ತದೆ. ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರದ ಅಪರಾಧಿಗಳು ತಮ್ಮ ಜೀವನದುದ್ದಕ್ಕೂ ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಕರಡು ಪ್ರಸ್ತಾಪಿಸುತ್ತದೆ ಎಂದು ವರದಿಯಾಗಿದೆ.
‘ಅಪರಾಜಿತಾ ಮಹಿಳೆ ಮತ್ತು ಮಕ್ಕಳ ಮಸೂದೆ (ಪಶ್ಚಿಮ ಬಂಗಾಳದ ಅಪರಾಧ ಕಾನೂನುಗಳು ಮತ್ತು ತಿದ್ದುಪಡಿ) ಮಸೂದೆ 2024’ ಎಂದು ಕರೆಯಲ್ಪಡುವ ಈ ಹೊಸ ಕಾನೂನು ಪ್ರಸ್ತುತ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಮತ್ತು ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳ ಬಗ್ಗೆ ಹೊಸ ನಿಯಮಗಳನ್ನು ಸೇರಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳನ್ನು ಉತ್ತಮವಾಗಿ ರಕ್ಷಿಸುವ ಗುರಿಯನ್ನು ಹೊಂದಿದೆ.ಇದು ನಿಜವಾಗಿಯೂ ಚಾಲ್ತಿ ಬರುತ್ತದೆಯೋ ಎಂದು ನಾಳೆ ಕಾದು ನೋಡಬೇಕಿದೆ.

