NCP ನಾಯಕ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶೂಟರ್ಗಳನ್ನು ಕ್ರೈ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹರಿಯಾಣ ನಿವಾಸಿ ಗುರ್ಮೈಲ್ ಬಲ್ಜೀತ್ ಸಿಂಗ್ (23) ಮತ್ತು ಉತ್ತರ ಪ್ರದೇಶದ ಬಹ್ರೈಚ್ ನಿವಾಸಿ ಧರ್ಮರಾಜ್ ರಾಜೇಶ್ ಕಶ್ಯಪ್ ಎಂದು ಗುರುತಿಸಲಾಗಿದೆ.
ಮತ್ತೋರ್ವ ಶೂಟರ್ ಶಿವಕುಮಾರ್ ಗೌತಮ್ ಅಲಿಯಾಸ್ ಶಿವ (20) ಕೂಡ ಉತ್ತರ ಪ್ರದೇಶದ ಬಹ್ರೈಚ್ ನಿವಾಸಿಯಾಗಿದ್ದು, ಆತನನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.
ಬಾಬಾ ಸಿದ್ಧಿಕಿಯನ್ನು ಹತ್ಯೆ ಮಾಡಿದ ಆರೋಪಿಗಳ ಜಾತಕವನ್ನು ಪೊಲೀಸರು ತೆರೆದಿಟ್ಟಿದ್ದಾರೆ. ಅದರಲ್ಲಿ ಧರ್ಮರಾಜ್ ಮತ್ತು ಶಿವಕುಮಾರ್ ಬಹ್ರೈಚ್ನ ಕೈಸರ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗಂದಾರಾ ಪಟ್ಟಣ ನಿವಾಸಿಗಳಾಗಿದ್ದು, ಇವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣವಿರಲಿಲ್ಲ. ಆದರೆ ಬಲ್ಜೀತ್ ಸಿಂಗ್ ಮೇಲೆ ಕೊಲೆ ಪ್ರಕರಣ ದಾಖಲಾಗಿತ್ತು ಎಂದು ಹೇಳಿದ್ದಾರೆ.

