ಸಾಮಾನ್ಯ ಜನರಿಗೆ ಆರ್ಥಿಕ ಸುರಕ್ಷತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್ ನಿಧಿ, ಅಯುಷ್ಮಾನ್ ಭಾರತ್‌ನಂತಹ ಅನೇಕ ಯೋಜನೆಗಳನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ವಿವಿಧ ರೀತಿಯಲ್ಲಿ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಈ ಯೋಜನೆಗಳಲ್ಲಿ ಫಲಾನುಭವಿಗಳು ಹಣಕಾಸಿನ ಸಹಾಯವನ್ನು ನೇರವಾಗಿ ಪಡೆಯುತ್ತಾರೆ.
ಅಯುಷ್ಮಾನ್ ಭಾರತ್
ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಆಯುಷ್ಮಾನ್ ಕಾರ್ಡ್‌ಗಳನ್ನು ಮೊದಲು ಅರ್ಹರಿಗೆ ನೀಡಲಾಗುತ್ತದೆ. ಇದಾದ ಅನಂತರ ಕಾರ್ಡ್‌ದಾರರು 5 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಇಲ್ಲಿ ಗಮನಿಸಿಸಬೇಕಾದ ವಿಚಾರವೆಂದರೆ ಪ್ರತಿ ವರ್ಷ ಕಾರ್ಡುದಾರರು 5 ಲಕ್ಷ ರೂ.ಗಳ ರಕ್ಷಣೆಯನ್ನು ಪಡೆಯುತ್ತಾರೆ. ಅಂದರೆ, ಪ್ರತಿ ವರ್ಷ ಈ ಮೊತ್ತದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.
ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?
ಆಯುಷ್ಮಾನ್ ಕಾರ್ಡ್ ಅನ್ನು ಆಫ್‌ಲೈನ್‌ನಲ್ಲಿ ಪಡೆಯಲು ಬಯಸಿದರೆ ಇದಕ್ಕಾಗಿ ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಹೋಗಬೇಕು. ಇಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿಯಾಗಿ ಅದನ್ನು ಮಾಡಿಕೊಳ್ಳಬಹುದು.
ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಮಾಡಿಕೊಳ್ಳಬಹುದು. ಇದಕ್ಕಾಗಿ ಈ ಯೋಜನೆಯ ಅಧಿಕೃತ ವೆಬ್‌ಸೈಟ್ https://beneficiary.nha.gov.in/ ಗೆ ಭೇಟಿ ನೀಡಬೇಕು.
ಯಾರಿಗೆ ಸಾಧ್ಯವಿಲ್ಲ?
ತೆರಿಗೆ ಪಾವತಿಸುವವರು, ಸರ್ಕಾರಿ ಕೆಲಸ ಮಾಡುವವರು, ಪಿಎಫ್ ಸದಸ್ಯರಾಗಿರುವವರು, ಇಎಸ್ ಐಸಿಯ ಲಾಭವನ್ನು ಪಡೆಯುವ ಜನರು, ವೈದ್ಯಕೀಯ ವಿಮೆ ಹೊಂದಿರುವವರು ಇದನ್ನು ಪಡೆಯುವುದು ಸಾಧ್ಯವಿಲ್ಲ.

