ತಿರುಪತಿ: ಕೊಲ್ಕತ್ತಾದಲ್ಲಿ ನಡೆದ ಘಟನೆ ದೇಶದಲ್ಲಿ ವೈದ್ಯರ ಸುರಕ್ಷತೆ, ಭದ್ರತೆಯ ಬಗ್ಗೆ ನೂರಾರು ಪ್ರಶ್ನೆಗಳನ್ನು ಎತ್ತಿದೆ. ಅದರಲ್ಲೂ ಮಹಿಳಾ ವೈದ್ಯರ ಸುರಕ್ಷತೆಯ ಬಗ್ಗೆ ದೊಡ್ಡ ಹೋರಾಟವೇ ನಡೆಯುತ್ತಿದೆ. ಇಂತಹ ಸಮಯದಲ್ಲಿ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರು ಸುರಕ್ಷರಾಗಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ.  ತಿರುಪತಿಯ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮಹಿಳಾ ವೈದ್ಯಯ ಮೇಲಾದ ಹಲ್ಲೆ ನಿಜಕ್ಕೂ ಭಯಾನಕವಾಗಿದೆ.

ತಿರುಪತಿಯ ಸ್ವಿಮ್ಸ್​ ಆಸ್ಪತ್ರೆಯಲ್ಲಿ ಒಂದು ಬೆಚ್ಚಿ ಬೀಳಿಸುವಂತ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಆ ಭಯಾನಕ ದೃಶ್ಯ ರೆಕಾರ್ಡ್ ಆಗಿದೆ. ರೋಗಿಯೊಬ್ಬ ಮಹಿಳಾ ವೈದ್ಯೆಯ ಕೂದಲ ಹಿಡಿದೆಳೆದು ಆಸ್ಪತ್ರೆಯ ಬೆಡ್​ನ ಸ್ಟೀಲ್ ರಾಡ್​ಗೆ ಚಚ್ಚಿದ್ದಾನೆ. ರೋಗಿಯ ಈ ದಿಢೀರ್​ ವರ್ತನೆಯನ್ನು ಕಂಡ ಉಳಿದ ವೈದ್ಯರು ಓಡಿ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಜೊತೆಗೆ ರೋಗಿಯನ್ನು ಬೇರೆಯ ಕಡೆಗೆ ಎಳೆದುಕೊಂಡು ಹೋಗಿದ್ದಾರೆ.

ಈ ಬಗ್ಗೆ ಸ್ವಿಮ್ಸ್​ನ ಉಪ ಕುಲಪತಿ ಡಾ ಆರ್ ವಿ ಕುಮಾರ್​ಗೆ ಪತ್ರ ಬರೆದಿರುವ ವೈದ್ಯೆ ನಾನು ತುರ್ತು ಸೇವಾ ವಿಭಾಗದಲ್ಲಿ ಆ ವೈದ್ಯೆ ಕಾರ್ಯನಿರ್ವಹಿಸುತ್ತಿದ್ದೆ ಬಂಗಾರು ರಾಜು ಎನ್ನುವ ರೋಗಿಯೊಬ್ಬ ಅಚಾನಕ್ಕಾಗಿ ನನ್ನ ಮೇಲೆ ದಾಳಿ ನಡೆಸಿದ್ದಾನೆ. ಹಿಂದಿನಿಂದ ಬಂದು ನನ್ನ ಜಡೆಯನ್ನು ಹಿಡಿದೆಳೆದು ಬೆಡ್​​ನ ಸ್ಟೀಲ್​ ರಾಡ್​ಗೆ ಹೊಡೆದಿದ್ದಾನೆ ಎಂದ ಉಲ್ಲೇಖಿಸಿದ್ದಾರೆ.

Just look at the audacity of the man trying to grab the female doctor in front of everyone

This is exactly why doctors are demanding Central protection act ! @APPOLICE100 pic.twitter.com/VEuG02BzQa

— Dr.Dhruv Chauhan (@DrDhruvchauhan) August 25, 2024