ನವದೆಹಲಿ : ಲೋಕಸಭೆ ಚುನಾವಣೆಯೊಟ್ಟಿಗೆ ನಡೆದ ನಾಲ್ಕು ವಿಧಾನಸಭಾ ಚುನಾವಣೆಗಳ ಪೈಕಿ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಜೆಪಿ ಮೇಲುಗೈ ಸಾಧಿಸಿದೆ.ಅರುಣಾಚಲಪ್ರದೇಶದಲ್ಲಿ ಬಿಜೆಪಿ ದೊಡ್ಡ ಬಹುಮತ ಪಡೆಯುತ್ತಿದೆ. ಸಿಕ್ಕಿಂನಲ್ಲಿ ಎಸ್ಕೆಎಂ (ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ) ಕ್ಲೀನ್ ಸ್ವೀಪ್ಗೆ ಬಹಳ ಸಮೀಪ ಇದೆ.
ಸಿಕ್ಕಿಂನಲ್ಲಿ ಇರುವ 32 ಸ್ಥಾನಗಳ ಪೈಕಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಬರೋಬ್ಬರಿ 32 ಕ್ಷೇತ್ರಗಳಲ್ಲಿ ಗೆಲುವು ಅಥವಾ ಮುನ್ನಡೆ ಪಡೆದುಕೊಂಡಿದೆ. ಈ ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳಿಗೆ ಠೇವಣಿ ಕೂಡ ಸಿಗುತ್ತಿಲ್ಲ. ಪ್ರೇಮ್ ಸಿಂಗ್ ತಮಾಂಗ್ ಅವರೇ ಸಿಎಂ ಆಗಿ ಮುಂದುವರಿಯುವ ನಿರೀಕ್ಷೆ ಇದೆ.
ಅರುಣಾಚಲದಲ್ಲಿ ಬಿಜೆಪಿ ದಿಗ್ವಿಜಯ
ಅರುಣಾಚಲಪ್ರದೇಶ ವಿಧಾನಸಭೆಯಲ್ಲಿ ಒಟ್ಟು 60 ಸ್ಥಾನಗಳಿವೆ. ಬಹುಮತಕ್ಕೆ 31 ಬೇಕಾಗುತ್ತದೆ. ಆಡಳಿತಾರೂಡ ಬಿಜೆಪಿ ಪಕ್ಷ 46 ಸ್ಥಾನಗಳಲ್ಲಿ ಗೆಲುವು ಅಥವಾ ಮುನ್ನಡೆ ಪಡೆದಿದೆ. ಇದರೊಂದಿಗೆ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಸತತವಾಗಿ ಸರ್ಕಾರ ರಚಿಸಲಿದೆ.

