ಭೂಕುಸಿತದಿಂದ ಕೊಚ್ಚಿ ಹೋಗಿರುವ ವಯನಾಡಿನ ಮುಂಡಕೈಗೆ ತೆರಳಲು ಭಾರತೀಯ ಸೇನೆ ಬೈಲಿ ಸೇತುವೆಯನ್ನು ಸಂಪೂರ್ಣ ಸಿದ್ಧಪಡಿಸಿದೆ. ಬುಧವಾರ ಆರಂಭವಾದ ನಿರ್ಮಾಣವು ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು ಹಗಲಿರುಳು ಶ್ರಮಿಸಿದ ಬಳಿಕ ಇಂದು (ಗುರುವಾರ) ಸಂಜೆ 5.50ರ ಸುಮಾರಿಗೆ ಸಂಪೂರ್ಣ ಸಿದ್ಧಗೊಂಡ ಸೇತುವೆಯ ಮೂಲಕ ಮೊದಲ ವಾಹನ ಹಾದು ಹೋಗಿದೆ.
ಸೇತುವೆಯು ಮುಂಡಕೈ ಮತ್ತು ಚೂರಲ್ಮಲವನ್ನು ಸಂಪರ್ಕಿಸುತ್ತದೆ. ಪ್ರಸ್ತುತ ಸೇನೆ ನಿರ್ಮಿಸುತ್ತಿರುವ ಬೈಲಿ ಸೇತುವೆ ಒಂದು ಬಾರಿಗೆ 24 ಟನ್ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹಿಟಾಚಿ ಸೇರಿದಂತೆ ದೊಡ್ಡ ರಕ್ಷಣಾ ಸಾಧನಗಳನ್ನು ಬೈಲಿ ಸೇತುವೆಯ ಮೂಲಕ ಮುಂಡಕೈಗೆ ಸಾಗಿಸಬಹುದು.

