ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಪಾಲಿಸದ ಪಾನೀಯಗಳಿಗೆ ‘ORS’ ಎಂಬ ಹೆಸರನ್ನು ಬಳಸಬಾರದು ಎಂದು FSSAI ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.
ಆದರೆ, ಈ ಆದೇಶದಿಂದ ತಪ್ಪಿಸಿಕೊಳ್ಳಲು ಹಲವು ಕಂಪನಿಗಳು ಒಂದು ಅಡ್ಡಹಾದಿ ಹಿಡಿದಿವೆ. ಪಾನೀಯದ ಅಂಶವನ್ನಾಗಲಿ ಅಥವಾ ಬಾಟಲಿಯನ್ನಾಗಲಿ ಬದಲಿಸುವ ಬದಲು, ಹಳೆಯ ‘ORS’ ಲೇಬಲ್ ಮೇಲೆ “Craze” ಎಂಬ ಹೊಸ ಹೆಸರಿನ ಸ್ಟಿಕ್ಕರ್ ಅನ್ನು ಅಂಟಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ.
ಇದು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಇದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ. ಸಕ್ಕರೆ ಅಂಶ ಹೆಚ್ಚಿರುವ ಈ ಪಾನೀಯಗಳನ್ನು ಇನ್ನೂ ‘ORS’ ಎಂದು ನಂಬಿ ಜನರು ಖರೀದಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ.

