ಅಹಮದಾಬಾದ್: ನೂತನ 500 ರೂ. ಮುಖಬೆಲೆಯ ನೋಟು ಚಲಾವಣೆಗೆ ಬಂದು ಎಂಟು ವರ್ಷಗಳಾಗುತ್ತ ಬಂದಿದೆ. ಹೊಸ ನೋಟುಗಳು ಚಲಾವಣೆಗೆ ಬರುತ್ತಿದ್ದಂತೆಯೇ ನಕಲಿ ನೋಟುಗಳ ಹಾವಳಿಗೆ ಕಡಿವಾಣ ಬಿದ್ದಿತ್ತು. ಆದರೆ ಇದೀಗ ಭಾರತದಲ್ಲಿ ಮತ್ತೊಮ್ಮೆ ನಕಲಿ ನೋಟುಗಳ ಸುದ್ದಿ ಸದ್ದು ಮಾಡಿದೆ.
ಗುಜರಾತ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 1.60 ಕೋಟಿ ರೂಪಾಯಿ ಮೌಲ್ಯದ ನಕಲಿ ಕರೆನ್ಸಿಯನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಪೊಲೀಸರು ವಶಪಡಿಸಿಕೊಂಡ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳಲ್ಲಿ ಮಹಾತ್ಮಗಾಂಧಿಯ ಬದಲು ನಟ ಅನುಪಮ್ ಖೇರ್ ಅವರ ಚಿತ್ರವನ್ನು ಬಳಸಿರುವುದು ಪತ್ತೆಯಾಗಿದೆ.
ನಕಲಿ ನೋಟುಗಳಲ್ಲಿ ನಟ ಅನುಪಮ್ ಖೇರ್ ಫೋಟೊ ಬಳಸಿದ್ದು, ಅದರ ಜೊತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲು ರಿಸೋಲ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿಸಲಾಗಿದೆ ಎಂಬುದಾಗಿ ಪೊಲೀಸ್ ಕಮಿಷನರ್ ರಾಜ್ ದೀಪ್ ನುಕುಂ ತಿಳಿಸಿದ್ದಾರೆ.

