ಭುವನೇಶ್ವರ: ಇತ್ತೀಚೆಗಷ್ಟೆ 46 ವರ್ಷದ ಬಳಿಕ ಪುರಿಯ ಜಗನ್ನಾಥ ದೇವಾಲಯದಲ್ಲಿರುವ ರತ್ನ ಭಂಡಾರದ ಬಾಗಿಲು ತೆರೆದಿತ್ತು. ಇದೀಗ ಅಲ್ಲಿ ಅಮೂಲ್ಯ ವಸ್ತುಗಳನ್ನು ಗುರುವಾರ ಸ್ಥಳಾಂತರಿಸುವ ವೇಳೆ ರಾಜರ ಕಾಲದ ಹಲವು ಆಯಧಗಳು ಪತ್ತೆಯಾಗಿವೆ.. ಹಿಂದಿನ ಕಾಲದಲ್ಲಿ ರಾಜರು ಯದ್ಧದಲ್ಲಿ ಗೆದ್ದ ಬಳಿಕ ದೇವಾಲಯಕ್ಕೆ ಚಿನ್ನ ಸೇರಿ ಹಲವು ವಸ್ತುಗಳನ್ನು ನೀಡುತ್ತಿದ್ದರು ಎಂಬ ಸ್ಥಳೀಯರ ನಂಬಿಕೆಗೆ ಇದು ಪುಷ್ಟಿ ನೀಡಿದೆ.
ಸ್ಥಳಾಂತರದ ಸಮಯದಲ್ಲಿ ರತ್ನ ಭಂಡಾರದ ಒಳಗಿನ ಕೋಣೆಯಲ್ಲಿನ ಮರದ ಪೆಟ್ಟಿಗೆ ಗಳಲ್ಲಿ ಕೆಲವು ಹಳೆಯ ಖಡ್ಗ, ಈಟಿ ಗಳು ದೊರೆತಿವೆ. ಶಸ್ತ್ರಾಸ್ತ್ರಗಳು ಸಾಕಷ್ಟು ಭಾರವಾಗಿದ್ದು, ಹಳೆಯ ವಾದ್ದರಿಂದ ಕಪ್ಪು ಬಣ್ಣಕ್ಕೆ ತಿರುಗಿದ್ದವು ಎಂದು ರತ್ನ ಭಂಡಾರ ಪ್ರವೇಶಿಸಿದ 11 ಮಂದಿಯ ಸಮಿತಿಯಲ್ಲಿನ ಸದಸ್ಯರೊಬ್ಬರು ಹೇಳಿದ್ದಾರೆ. ಜತೆಗೆ ಅವುಗಳನ್ನು ಸೀಲ್ ಮಾಡಿ ಇರಿಸಲಾಗಿದೆ ಎಂದು ಹೇಳಿದ್ದಾರೆ.

