ಕೇರಳ: ಕೇರಳದ ಖಾಸಗಿ ಆಸ್ಪತ್ರೆಯೊಂದರಲ್ಲಿ 14 ವರ್ಷದ ಬಾಲಕನೊಬ್ಬ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್(ಮಿದುಳು ತಿನ್ನುವ ಅಮೀಬಾ) ಎಂಬ ಅಪರೂಪದ ಮಿದುಳು ಸೋಂಕಿನಿಂದ ಕೊನೆಯುಸಿರೆಳೆದಿರುವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕ ಕೊಳವೊಂದರಲ್ಲಿ ಈಜಾಡಿದ ನಂತರ ಬಾಲಕನಿಗೆ ಈ ಸೋಂಕು ಹರಡಿರುವುದಾಗಿ ಆರೋಗ್ಯ ಇಲಾಖೆಯ ಮೂಲಗಳು ಬಹಿರಂಗಪಡಿಸಿವೆ. ಅಪರೂಪದ ಮೆದುಳು ತಿನ್ನುವ ಅಮೀಬಾದಿಂದಾಗಿ ಸಾವನ್ನಪ್ಪಿರುವ ಮೂರನೇ ಘಟನೆ ಇದಾಗಿದೆ.
ಮೇ 21ರಂದು ಮಲಪ್ಪುರಂನ ಐದು ವರ್ಷದ ಪುಟ್ಟ ಬಾಲಕಿ ಈ ಸೋಂಕಿನಿಂದ ಮೃತಪಟ್ಟಿದ್ದು, ಜೂನ್ 25ರಂದು ಕಣ್ಣೂರ್ ನ 13 ವರ್ಷದ ಬಾಲಕಿಯೊಬ್ಬಳು ಕೊನೆಯುಸಿರೆಳೆದಿದ್ದಳು. ಇದೀಗ ಮೂರನೇ ಘಟನೆ ನಡೆದಿದೆ.

