ಅಮೆರಿಕನ್ ಏರ್​ಲೈನ್ಸ್ ವಿಮಾನ ಟೇಕ್​ ಆಫ್​ ಆಗುವುದಕ್ಕೂ ಮುನ್ನ ರನ್​ವೇನಲ್ಲೇ ಟೈರ್​ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಘಟನೆ ಅಮೆರಿಕದ ಟ್ಯಾಂಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಫ್ಲೋರಿಡಾ ವಿಮಾನ ನಿಲ್ದಾಣದಿಂದ ಅಮೆರಿಕದ ಫಿಯೋನಿಕ್ಸ್​ಗೆ ಈ ವಿಮಾನ ಹೋಗುತ್ತಿತ್ತು ಎನ್ನಲಾಗಿದೆ. ಬೆಳಗ್ಗೆ 8 ಗಂಟೆಯ ವೇಳೆ ಈ ಅವಘಡ ಸಂಭವಿಸಿದೆ.

ಇನ್ನೇನು ವಿಮಾನ ಟೇಕ್​ಆಫ್​ ಆಗಬೇಕು ಎನ್ನುವಾಗ ಜೋರಾಗಿ ರನ್​ವೇನಲ್ಲಿ ಓಡುತ್ತಾ ಹೊರಟಿದ್ದ ವಿಮಾನದ ಬಲಭಾಗದ ಟೈರ್​ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿತ್ತು. ಹೇಗೋ ಮಾಡಿ ವಿಮಾನವನ್ನು ರನ್​ವೇನಲ್ಲೇ ನಿಲ್ಲಿಸಲಾಯಿತು. ವಿಮಾನದಲ್ಲಿ 174 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಇದ್ದರು ಯಾರಿಗೂ ಯಾವುದೇ ಅಪಾಯವಾಗಿಲ್ಲ. ವಿಮಾನವನ್ನು ಟರ್ಮಿನಲ್​ಗೆ ಕಳುಹಿಸಲಾಗಿದೆ ಎಂದು ಅಮೆರಿಕನ್ ಏರ್​ಲೈನ್ಸ್ ವಕ್ತಾರ ಆಲ್ಫ್ರೆಡೊ ಗಾರ್ಡುನೊ ಹೇಳಿದ್ದಾರೆ.

ಪ್ರಯಾಣಿಕರನ್ನು ಬೇರೊಂದು ವಿಮಾನಕ್ಕೆ ಸ್ಥಳಾಂತರಿಸಲಾಯಿತು, ಘಟನೆಯಿಂದಾಗಿ ಫ್ಲೋರಿಡಾ ವಿಮಾನ ನಿಲ್ದಾಣದಲ್ಲಿ ಇತರೆ ವಿಮಾನ ಕಾರ್ಯಚರಣೆಗಳಿಗೆ ತೊಂದರೆಯಾಗಿಲ್ಲ ಎಂದು ಏರ್​ಲೈನ್ಸ್​ ಹೇಳಿದೆ.

 

As the plane was picking up speed and seconds away from liftoff, the tires blew out.

The pilot slammed on the brakes as the plane barreled towards… pic.twitter.com/P5kZ3N6pUO

— Collin Rugg (@CollinRugg) July 10, 2024