ಮುಂಬೈ: ಮುಖೇಶ್ ಅಂಬಾನಿ ಕುಟುಂಬವು ಧೀರೂಭಾಯಿ ಅಂಬಾನಿಯವರ ಹೆಸರಿನಲ್ಲಿ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ಸ್ಥಾಪಿಸಿದ್ದು, ಇದು ದೇಶದ ಅತ್ಯಂತ ದುಬಾರಿ ಶಾಲೆಯಾಗಿ ಹೊರ ಹೊಮ್ಮಿದೆ.
ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‍ನಲ್ಲಿ ಪ್ಲೇಹೋಂನಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತದೆ. ಇಲ್ಲಿ ಅನೇಕ ಬಾಲಿವುಡ್ ಸಿನಿಮಾ ತಾರೆಯರ ಮಕ್ಕಳು ಸೇರಿದಂತೆ ಶ್ರೀಮಂತರ ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ.
ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‍ನಲ್ಲಿ 2024ರ ಶೈಕ್ಷಣಿಕ ವರ್ಷದಲ್ಲಿ ಎಲ್ ಕೆಜಿಯಿಂದ 12ನೇ ತರಗತಿಯವರೆಗೆ ಶುಲ್ಕದ ವಿವರ, ಪ್ಲೇಹೋಂನಿಂದ ಎಲ್‌ಕೆಜಿವರೆಗೆ ಟ್ಯೂಷನ್ ಫೀ ಸೇರಿದಂತೆ ಒಟ್ಟು ವಾರ್ಷಿಕ ಶುಲ್ಕ 5 ಲಕ್ಷ ರೂ. ದಾಟುತ್ತದೆ. ಪುಸ್ತಕಗಳು, ಲೇಖನ ಸಾಮಗ್ರಿಗಳು, ಸಮವಸ್ತ್ರ ಮತ್ತು ಸಾರಿಗೆಯಂತಹ ವ್ಯವಸ್ಥೆಗಳಿಗೆ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ.
ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‍ನಲ್ಲಿ ಎಲ್‍ಕೆಜಿಯಿಂದ 7ನೇ ತರಗತಿಗೆ ವಾರ್ಷಿಕ ಟ್ಯೂಷನ್ ಫೀ ಮಾತ್ರವೇ 1,70,000 ರೂ.ಗಳು. ಹಾಗೇ 8ರಿಂದ 10 ನೇ ತರಗತಿಯ ವಾರ್ಷಿಕ ಟ್ಯೂಷನ್ ಫೀ 5,90,000 ರೂಪಾಯಿ. 11 ಮತ್ತು 12ನೇ ತರಗತಿಗೆ ವಾರ್ಷಿಕ ಟ್ಯೂಷನ್ ಫೀ 9,65,000 ರೂಪಾಯಿ.
ಈಜು ತರಬೇತಿ, ಪ್ರಯೋಗಾಲಯ ಇತ್ಯಾದಿಗಳೆಲ್ಲ ಸೇರಿಸಿದರೆ ಶುಲ್ಕ ಇದರ ಹಲವು ಪಟ್ಟು ಹೆಚ್ಚುತ್ತದೆ. ಈ ಶಾಲೆಯಲ್ಲಿ ಇನ್ನೂ ಅನೇಕ ಸುಸಜ್ಜಿತ ಸೌಲಭ್ಯಗಳಿವೆ. ಆಟವಾಡಲು ದೊಡ್ಡ ಹೈಟೆಕ್ ಮೈದಾನಗಳಿವೆ. ಅಪರೂಪದ ಗ್ರಂಥಾಲಯವಿದೆ.

