ನವದೆಹಲಿ: ಆಲ್ಕೋಹಾಲ್ ಪ್ರಿಯರಿಗೆ ಇದೊಂದು ಗುಡ್‌ ನ್ಯೂಸ್‌. ಇನ್ನು ಮಧ್ಯ ಕೂಡ 10 ನಿಮಿಷದಲ್ಲಿ ನಿಮ್ಮ ಬಾಗಿಲಿಗೆ ಬರಲಿದೆ. ಇದುವರೆಗೂ ಹೇಗೆ ಜ್ಯೊಮಾಟೊ ಮತ್ತು ಸ್ವಿಗ್ಗಿಯಲ್ಲಿ ಫುಡ್‌ ಆರ್ಡರ್‌ ಮಾಡುತ್ತಿದ್ದೆವೋ ಅದೇ ರೀತಿ ಮಧ್ಯವನ್ನು ಕೂಡ ಆರ್ಡರ್‌ ಮಾಡಬಹುದಾಗಿದೆ.

ಕರ್ನಾಟಕ, ದೆಹಲಿ, ಹರ್ಯಾಣ, ಪಂಜಾಬ್, ತಮಿಳುನಾಡು, ಗೋವಾ ಹಾಗೂ ಕೇರಳದಲ್ಲಿ ಇದನ್ನು ಮೊದಲು ಜಾರಿಗೆ ತರಲಾಗುತ್ತಿದೆ. ಸ್ವಿಗ್ಗಿ, ಬಿಗ್​ಬಾಸ್ಕೆಟ್, ಜೊಮ್ಯಾಟೊ ಮೂಲಕ ಮದ್ಯ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.