ವಾರಾಣಸಿ : ವಾರಾಣಸಿಯಿಂದ ಮುಂಬೈಗೆ ಹಾರಾಟ ನಡೆಸುತ್ತಿದ್ದ ಅಲಸ್ಕ ವಿಮಾನ ಪ್ರಯಾಣಿಕರೊಬ್ಬರು ತೀವ್ರ ಸ್ವಸ್ಥಗೊಂಡ ಕಾರಣ ತುರ್ತು ಭೂಸ್ಪರ್ಶ ಮಾಡಿದ ಘಟನೆ ಭೋಪಾಲ್ ನ ರಾಜಾ ಭೋಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ (ಆಗಸ್ಟ್ 15) ನಡೆದಿದೆ.ವಾರಾಣಸಿಯಿಂದ ಮುಂಬೈಗೆ ಹಾರುತ್ತಿದ್ದ QP1524 ವಿಮಾನ ವೈದ್ಯಕೀಯ ತುರ್ತುಸ್ಥಿತಿಯ ಕಾರಣದಿಂದಾಗಿ ಮಾರ್ಗವನ್ನು ಬದಲಿಸಿ ಭೋಪಾಲ್‌ನಲ್ಲಿ ಇಳಿಯಿತು.

ನಮ್ಮ ಕ್ಯಾಬಿನ್ ಸಿಬಂದಿ ಮತ್ತು ತತ್ ಕ್ಷಣದ ಸಹಾಯವನ್ನು ಒದಗಿಸಿದ ವೈದ್ಯರ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಪ್ರಯಾಣಿಕ ದುರದೃಷ್ಟವಶಾತ್ ನಿಧನ ಹೊಂದಿದ್ದಾರೆ ”ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.