ಮುಂಬೈ: ಏರ್‌ ಇಂಡಿಯಾ ಲೋಡರ್ಸ್ ಉದ್ಯೋಗಕ್ಕಾಗಿ ನೂಕುನುಗ್ಗಲು ಉಂಟಾಗಿತ್ತು ಕಾಲ್ತುಳಿತ ಭೀತಿ ಕೂಡ ಉಂಟಾಗಿದೆ 600 ಉದ್ಯೋಗಾವಕಾಶಕ್ಕಾಗಿ ಬರೋಬ್ಬರಿ 25,000 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಆಗಮಿಸಿದ ಪರಿಣಾಮ ಏರ್‌ ಇಂಡಿಯಾ ಸಿಬ್ಬಂದಿಗಳು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟ ಘಟನೆ ನಡೆದಿದೆ.

ವಿಮಾನ ನಿಲ್ದಾಣದ ಲೋಡರ್ಸ್ ಉದ್ಯೋಗದ ಅರ್ಜಿ ಪಡೆಯಲು ಅಭ್ಯರ್ಥಿಗಳು ಒಬ್ಬರನ್ನೊಬ್ಬರು ತಳ್ಳಾಡುತ್ತಾ ಕೌಂಟರ್‌ ನತ್ತ‌ ನುಗ್ಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅಭ್ಯರ್ಥಿಗಳು ಊಟೋಪಚಾರ ಇಲ್ಲದೇ ಗಂಟೆಗಟ್ಟಲೇ ಸಾಲಿನಲ್ಲಿ ನಿಂತ ಪರಿಣಾಮ ಹಲವಾರು ಮಂದಿ ಅಸ್ವಸ್ಥರಾದಂತೆ ಕಂಡು ಬಂದಿರುವುದಾಗಿ ವರದಿಯಾಗಿದೆ.

ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಲಗೇಜ್‌ ಲೋಡಿಂಗ್‌ ಮತ್ತು ಅನ್‌ ಲೋಡಿಂಗ್‌ (ಲಗೇಜ್‌ ಇಳಿಸುವ) ಮಾಡುವ ಕೆಲಸಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಪ್ರತಿ ಕಾರ್ಗೋ ಮತ್ತು ಫುಡ್‌ ಸರಬರಾಜು ವಿಮಾನಗಳಿಗೆ ಕನಿಷ್ಠ ಐವರು ಲೋಡರ್ಸ್‌ ಗಳ ಅಗತ್ಯವಿದೆ ಎಂದು ವರದಿ ತಿಳಿಸಿದೆ.

https://x.com/vani_mehrotra/status/1813211284357148729