ವಿಮಾನ ಪ್ರಯಾಣದ ವೇಳೆ ವೈ-ಫೈ ಬಳಸುವ ಅವಕಾಶವನ್ನು ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆ ನೀಡಲು ಮುಂದಾಗಿದೆ. ಅದಕ್ಕೆ ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ ಸಾಕ್ಷಿಯಾಗಿದೆ.

ಪ್ರಸ್ತುತ ಜಗತ್ತೇ ಇಂಟರ್​​ನೆಟ್​ ಇಲ್ಲದೆ ಮುನ್ನಡೆಯುವುದು ಅಸಾಧ್ಯ. ಇಂಟರ್​ನೆಟ್​ವೊಂದಿದ್ದರೆ ಆಕಾಶದಲ್ಲೂ ಪ್ರಯಾಣದ ವೇಳೆ ಕೆಲಸ ಮಾಡಬಹುದು ಎಂಬುದಕ್ಕೆ ಈಗ ಏರ್​ಇಂಡಿಯಾ ಸಂಸ್ಥೆ ವೈ-ಫೈ ಆಯ್ಕೆಯನ್ನು ನೀಡುತ್ತಿದೆ. ಈಗಾಗಲೇ ದೆಹಲಿಯಿಂದ ಲಂಡನ್​ಗೆ ಪ್ರಯಾಣಿಸುವ A350 ವಿಮಾನದಲ್ಲಿ ತನ್ನ ಪ್ರಯಾಣಿಕರಿಗೆ ವೈ-ಫೈ ಸೇವೆಯನ್ನು ನೀಡಿದೆ. ಆ ಮೂಲಕ ವೈ-ಫೈ ಸೇವೆ ಒದಗಿಸಿದ ಮೊದಲ ವಿಮಾನವಾಗಿ ಗುರುತಿಸಿಕೊಂಡಿದೆ.

ಏರ್​ ಇಂಡಿಯಾ ದೆಹಲಿ ಮತ್ತು ಲಂಡನ್​ ವಿಮಾನ ನಿಲ್ದಾಣದ ನಡುವೆ ಸಂಚರಿಸುವ A350-900 ವಿಮಾನದಲ್ಲಿ ವೈ-ಫೈ ಸೇವೆ ಪ್ರಾರಂಭಿಸಿರುವುದಾಗಿ ತಿಳಿಸಿದೆ. ಇದೊಂದು ಮಹತ್ವಾಕಾಂಕ್ಷೆಯ ಪರಿವರ್ತನೆಯ ಪ್ರಯಾಣ ಎಂದು ಕರೆದಿದೆ. ಈ ಮಾರ್ಗದಲ್ಲಿ ದಿನಕ್ಕೆ ಎರಡು ಬಾರಿ ವಿಮಾನ ಸಂಚರಿಸುತ್ತದೆ.

ಏರ್​ ಇಂಡಿಯಾ ಸಂಸ್ಥೆ ಟಾಟಾ ಗ್ರೂಪ್​ ಒಡೆತನಕ್ಕೆ ಸೇರಿದೆ. A350 ವಿಮಾನದಲ್ಲಿ 28 ಖಾಸಗಿ ಸೀಟ್​ ಹೊಂದಿವೆ. ಪ್ರೀಮಿಯಂ ಎಕಾನಮಿಯಲ್ಲಿ 24 ಸೀಟುಗಳಿವೆ. ಎಕಾನಮಿಯಲ್ಲೂ 24 ಸೀಟುಗಳಿವೆ. ಏರ್​-ಟು-ಗ್ರೌಂಡ್​ ಮತ್ತು ಉಪಗೃಹಗಳ ವೈ-ಫೈ ಮೂಲಕ ಸ್ಮಾರ್ಟ್​ಫೋನ್​ ಕಾರ್ಯನಿರ್ವಹಿಸುತ್ತದೆ. ನೆಲದ ಮೇಲಿರುವ ಸೆಲ್​ ಟವರ್​​ಗಳಿಂದ ವಿಮಾನಗಳಿಗೆ ವೈ-ಫೈ ಸೇವೆ ಒದಗಿಸುತ್ತದೆ.