ಗುಜರಾತ್: ಗುಜರಾತ್​ನ ಆನಂದ್​ ಬಳಿ ಸಂಭವಿಸಿದ ಬಸ್ ಅಪಘಾತದಲ್ಲಿ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಹಲವರು ಗಾಯಗೊಂಡಿದ್ದಾರೆ.ಅಹಮದಾಬಾದ್ ವಡೋದರಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.

ಜುಲೈ 15 ರಂದು ಬೆಳಿಗ್ಗೆ 4.30 ರ ಸುಮಾರಿಗೆ ಐಷಾರಾಮಿ ಬಸ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತದ ಸುದ್ದಿ ತಿಳಿದ ತಕ್ಷಣ ಆನಂದ ಅಗ್ನಿಶಾಮಕ ದಳ, ಎಕ್ಸ್‌ಪ್ರೆಸ್ ಹೈವೇ ಪೆಟ್ರೋಲಿಂಗ್ ತಂಡ ಮತ್ತು ಆನಂದ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು.

ಎಲ್ಲಾ ಗಾಯಾಳುಗಳನ್ನು ಆನಂದ್‌ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಡಿಕ್ಕಿಯ ನಂತರ ಬಸ್ ಮತ್ತು ಟ್ರಕ್ ತೀವ್ರವಾಗಿ ಜಖಂಗೊಂಡಿದೆ. ಮೃತ ದೇಹಗಳ ಪಂಚನಾಮ ಸಿದ್ಧಪಡಿಸುವ ಮೂಲಕ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.